Category: ಹರಿಹರ

ಜಾಕ್‌ವೆಲ್‌ ಬಳಿ ನೀರಿಗೆ ಗುಂಡಿ ನಿರ್ಮಾಣ

ಹರಿಹರ : ಇಲ್ಲಿನ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನಗರಕ್ಕೆ ನೀರು ಪೂರೈಸುವ ಜಾಕ್‌ವೆಲ್‌ ಬಳಿ ಸಮರ್ಪಕ ನೀರು ನಿಲ್ಲುವಂತೆ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್‌ ಮತ್ತು   ಜಲಸಿರಿ ಅಧಿ ಕಾರಿ ನವೀನ್‌ ಕುಮಾರ್‌ ಜೆಸಿಬಿಯಿಂದ ಗುಂಡಿ ತೆಗೆಸಿದರು.

ಕೆ ಎನ್ ಹಳ್ಳಿ : ಸಂಭ್ರಮದ ಉಚ್ಛಾಯ, ಸೀತಾರಾಮ ಕಲ್ಯಾಣ ಮಹೋತ್ಸವ

ಮಲೇಬೆನ್ನೂರು : ಸಮೀಪದ ಕೆ. ಎನ್. ಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಪ್ರಯುಕ್ತ ಸೀತಾರಾಮ ಕಲ್ಯಾಣ ಮಹೋತ್ಸವ ಮತ್ತು ಶ್ರೀ ಆಂಜನೇಯ ಸ್ವಾಮಿ ಉಚ್ಛಾಯ ರಥೋತ್ಸವ ಬುಧವಾರ ನಡೆದವು.

ಕೊಕ್ಕನೂರಿನಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ

ಮಲೇಬೆನ್ನೂರು : ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸ ವವು ರಾಮನವಮಿ ಅಂಗವಾಗಿ ಬುಧವಾರ ಮಧ್ಯಾಹ್ನ ಸಂಪ್ರದಾಯದಂತೆ ಜರುಗಿತು.

ಹೊಳೆಸಿರಿಗೆರೆ : ವಿಜೃಂಭಣೆಯ ರಥ

ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ರಾಮ ನವಮಿ ಅಂಗವಾಗಿ ಬುಧವಾರ ಬೆಳಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಹಾಲಿವಾಣ : ಸಂಭ್ರಮದ ಉಚ್ಛಾಯ

ಮಲೇಬೆನ್ನೂರು : ಹಾಲಿವಾಣ ಗ್ರಾಮದಲ್ಲಿ ಶ್ರೀರಾಮ ನವಮಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಯ ಉಚ್ಛಾಯವು ಗ್ರಾಮಸ್ಥರ ಸಮ್ಮುಖದಲ್ಲಿ ಬುಧವಾರ ಅದ್ಧೂರಿಯಾಗಿ ಜರುಗಿತು. ಮಹಾಮಂಗಳಾರತಿ ಹಾಗೂ ಜಯಘೊಷಗಳೊಂದಿಗೆ   ಉಚ್ಛಾಯವು ರಥಬೀದಿಯಲ್ಲಿ ಸಾಗಿ ಬನ್ನಿಮಂಟಪ ತಲುಪಿ ಮಂಗಳಾರತಿ ಮಾಡಿಸಿಕೊಂಡು ನಂತರ ಸ್ವಸ್ಥಾನಕ್ಕೆ ಬಂದು ತಲುಪಿತು. 

ಕಾಂಗ್ರೆಸ್ ಅಭ್ಯರ್ಥಿಯಿಂದ ನಾಳೆ ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶಿಸಲು ಹರಿಹರ ತಾ. ಕಾಂಗ್ರೆಸ್ ನಿರ್ಧಾರ

ಹರಿಹರ : ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ನಾಳೆ ಗುರುವಾರ ನಾಮಪತ್ರ ಸಲ್ಲಿಸಲಿದ್ದು, ಈ ಕಾರ್ಯಕ್ರಮದಲ್ಲಿ ಹರಿಹರ ತಾಲ್ಲೂಕಿನಿಂದ ಸಹಸ್ರ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಮಾಜಿ ಶಾಸಕ ಎಸ್‌.ರಾಮಪ್ಪ ಹಾಗೂ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಜಂಟಿಯಾಗಿ ಹೇಳಿದರು.

ಹರಳಹಳ್ಳಿ : ನೂತನ ರಥಕ್ಕೆ ಕಳಸಾರೋಹಣ, ಇಂದು ರಥೋತ್ಸವ

ಮಲೇಬೆನ್ನೂರು : ಸಮೀಪದ ಹರಳಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಥಕ್ಕೆ ಮಂಗಳವಾರ ಬೆಳಗ್ಗೆ ಕಣ್ವಕುಪ್ಪೆ ಗವಿಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳಸಾರೋಹಣ ಸಂಭ್ರಮದಿಂದ ನಡೆಯಿತು. ರಾತ್ರಿ ಚಿಗರಿ ಉತ್ಸವ ಜರುಗಿತು.

ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದ್ದ ಅಂಬೇಡ್ಕರ್

ಹರಿಹರ : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಜನರ ಒಳಿತಿಗಾಗಿ ಸಂವಿಧಾನವನ್ನು ರಚಿಸುವ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯ ವನ್ನು ಒದಗಿಸಿದ್ದರಿಂದ ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದರು ಎಂದು ತಹಶೀಲ್ದಾರ್ ಗುರುಬಸವರಾಜ್ ಹೇಳಿದರು.

ಯೋಗ್ಯ ಅಭ್ಯರ್ಥಿಗೆ ಮತ ಹಾಕಿ

ಮಲೇಬೆನ್ನೂರು : ದೇಶದಲ್ಲಿ ಚುನಾವಣೆ ನಡೆಯುತ್ತಿದ್ದು, ಧರ್ಮ, ರಾಷ್ಟ್ರ ರಕ್ಷಣೆ, ಜನಪರ ಕಾಳಜಿ ಇರುವಂತಹ ಯೋಗ್ಯ ಅಭ್ಯರ್ಥಿಗೆ ಮತ ಹಾಕುವಂತೆ ಶಿವಮೊಗ್ಗದ ಸತ್‌ ಉಪಾಸಿ ದಿವ್ಯಾಶ್ರಮದ ಬ್ರಹ್ಮಾನಂದ ತೀರ್ಥ ಭಿಕ್ಷು ಜನತೆಗೆ ಸಲಹೆ ನೀಡಿದರು.

ಹರಿಹರ ಕ್ಷೇತ್ರದಲ್ಲಿ ಬಿಜೆಪಿ – ಜೆಡಿಎಸ್ ಜಂಟಿ ಪ್ರಚಾರ ಆರಂಭ : ಬಿಜೆಪಿ ಗೆಲುವಿಗೆ ಸಂಕಲ್ಪ

ಮಲೇಬೆನ್ನೂರು : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಪ್ರಚಾರ ಭಾನುವಾರ ಹರಿಹರ ತಾಲ್ಲೂಕಿನಲ್ಲಿ ಆರಂಭಗೊಂಡಿತು.

ಹರಿಹರ : ಮಳೆಗಾಗಿ ವಿಶೇಷ ಹೋಮ, ಹವನ ಪೂಜೆ

ಹರಿಹರ : ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯದಲ್ಲಿ ಮಳೆ, ಬೆಳೆಗಳು ಸಮೃದ್ಧಿಯಾಗಿ, ಜನರು ನೆಮ್ಮದಿ ಜೀವನ ನಡೆಸುವಂತೆ ಶ್ರೀ ಹರಿಹರೇಶ್ವರ ಸ್ವಾಮಿ ಮತ್ತು ಲಕ್ಷ್ಮಿದೇವಿಗೆ ವಿಶೇಷ ಹೋಮ, ಹವನ, ಪೂಜಾ ಕಾರ್ಯಗಳು ಇಂದು ನಡೆದು ನಗರದಲ್ಲಿ ಮಳೆಯ ಸಿಂಚನದ ಸ್ಪರ್ಶವಾಗಿದೆ. 

error: Content is protected !!