Category: ಅಪರಾಧ

Home ಅಪರಾಧ
Post

ಬೈಪಾಸ್‌ನಲ್ಲಿ ರಸ್ತೆ ಅಪಘಾತ ಸಾವು, ಓರ್ವನ ಸ್ಥಿತಿ ಗಂಭೀರ

ಟೈರ್ ಸ್ಫೋಟಗೊಂಡ ಪರಿಣಾಮ ಒಣ ಮೆಣಸಿನಕಾಯಿ ಸಾಗಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಓರ್ವ ವ್ಯಾಪಾರಿ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರಭಾಗದ ಶಾಮನೂರು ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಇಂದು ಸಂಭವಿಸಿದೆ. 

Post

ಸ್ನೇಹಿತನ ಕೊಲೆ : ಅಪರಾಧಿಗೆ ಶಿಕ್ಷೆ

ಬೈದಿದ್ದಕ್ಕೆ ಸ್ನೇಹಿತನನ್ನೇ ಚಾಕುವಿನಿಂದ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಾದ ಆತ್ಮೀಯ ಗೆಳೆಯನಿಗೆ ಇಲ್ಲಿನ 1ನೇ ಜಿಲ್ಲಾ ಮತ್ತು ಸತ್ರ  ನ್ಯಾಯಾಲಯ 6 ವರ್ಷದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

Post

ರೈಲ್ವೇ ಹಳಿ ಮೇಲೆ ಫೋಟೋ ಶೂಟ್ ರೈಲು ಡಿಕ್ಕಿ : ಸ್ಥಳದಲ್ಲೇ ಬಾಲಕ ಸಾವು

ರೈಲ್ವೇ ಹಳಿ ಮೇಲೆ ಫೋಟೋ ಶೂಟ್ ಗೆ ನಿಂತ ಬಾಲಕನೋರ್ವ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಡಿಸಿಎಂ ಟೌನ್ ಶಿಪ್ ಬಳಿ ಇಂದು ಸಂಜೆ ನಡೆದಿದೆ.

Post

ಕೆರೆಗೆ ಉರುಳಿದ ಕಾರು : ಪ್ರಾಣಾಪಾಯದಿಂದ ಪಾರು

ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದು ಮೂವರು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿಗೆ ಸಮೀಪದ ಬಾತಿ ಕೆರೆಯಲ್ಲಿ ಇಂದು ನಡೆದಿದೆ.

Post

ಸೈಕಲ್‌ಗೆ ಕಾರು ಡಿಕ್ಕಿ: ಸವಾರನಿಗೆ ಗಾಯ

ನಗರದ ಡೆಂಟಲ್ ಕಾಲೇಜು ಬಳಿಯ  ಬಾಲಕರ ವಸತಿ ನಿಲಯದ ಬಳಿ ಕಾರೊಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ರಾತ್ರಿ 10.15ರ ವೇಳೆಗೆ ನಡೆದಿದೆ. ಸೈಕಲ್ ಮುಂಭಾಗ ಜಖಂಗೊಂಡಿದ್ದು, ಸವಾರ ಗಾಯಗೊಂಡಿದ್ದಾನೆ. 

Post

ಎರಡು ಕಳ್ಳತನ ಪ್ರಕರಣಗಳು ಪತ್ತೆ

ಎರಡು ಕಳ್ಳತನ ಪ್ರಕರಣಗಳನ್ನು  ಪತ್ತೆ ಮಾಡಿರುವ ಆಜಾದ್ ನಗರ ಪೊಲೀಸರು, ಓರ್ವನ ಬಂಧಿಸಿ, 1 ಲಕ್ಷದ 50 ಸಾವಿರ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳ ವಶಪಡಿಸಿಕೊಂಡಿದ್ದಾರೆ.

Post

ಹಾಡಹಗಲೇ ಶಿಕ್ಷಕಿಯ ಸರ ಅಪಹರಣ

ಪಾದಚಾರಿ ಸರ್ಕಾರಿ ಶಾಲೆಯ ಶಿಕ್ಷಕಿಯೋರ್ವರ ಕೊರಳಲ್ಲಿದ್ದ ಬಂಗಾರದ ಸರವನ್ನು ಹಾಡಹಗಲೇ ಅಪಹರಿಸಿರುವ ಘಟನೆ ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

Post

ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ; ಬಂಧನ

ಬುದ್ಧಿಮಾಂದ್ಯ ಮಹಿಳೆ ಮೇಲೆ ಇಬ್ಬರು ಅತ್ಯಾಚಾರವೆಸಗಿರುವ ಘಟನೆ ತಾಲ್ಲೂಕಿನ ಮ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮ್ಯಾಸರಹಳ್ಳಿ ಪ್ರಭು ಮತ್ತು ಆತನ ಸ್ನೇಹಿತ ಕುಂದುವಾಡ ಕಿರಣ್ ಎಂಬುವವರೇ ಅತ್ಯಾಚಾರ ವೆಸಗಿರುವ ಆರೋಪಿಗಳು ಎನ್ನಲಾಗಿದೆ.

Post

ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬಸ್ ಹರಿದು ಪಾದಚಾರಿ ಸಾವು

ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಪಾದಚಾರಿ ಮೇಲೆ ಸ್ಟೀಲ್ ಕಂಪನಿಯ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಧಾರುಣವಾಗಿ ಸಾವಿಗೀಡಾಗಿರುವ ಘಟನೆ ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ (ಅರುಣ ಸರ್ಕಲ್) ವೃತ್ತದಲ್ಲಿ ಇಂದು ರಾತ್ರಿ ಸಂಭವಿಸಿದೆ.

Post

ವಿದ್ಯುತ್ ಟ್ರಾನ್ಸ್‌ಫಾರ್ಮರ್‍ಗೆ ಖಾಸಗಿ ಬಸ್ ಡಿಕ್ಕಿ

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‍ಗೆ ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಹೊರ ವಲಯದ ಎಲೆಬೇತೂರು ಗ್ರಾಮದ ಬಳಿ ಇಂದು ಸಂಭವಿಸಿದೆ.