Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ
Post

ಕೊರತೆ : ವಿವಿಧ ರೈಲುಗಳು ರದ್ದು

ಪ್ರಯಾಣಿಕರ ಕೊರತೆಯ ಕಾರಣಕ್ಕಾಗಿ ನೈರುತ್ಯ ರೈಲ್ವೆ ವಿಭಾಗವು ವಿವಿಧ ವಿಶೇಷ ರೈಲುಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಿದೆ. ಯಶವಂತಪುರ-ಬೀದರ್ (02671) ಮೇ 04 ರಿಂದ, ಬೀದರ್-ಯಶವಂತಪುರ (02672) ರೈಲು ಮೇ 05 ರಿಂದ ರದ್ದುಪಡಿಸಲಾಗಿದೆ.

Post

8ರಂದು ಮೈಸೂರು-ದಾನಪುರ್ ಬೇಸಿಗೆ ವಿಶೇಷ ರೈಲು

ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ವತಿಯಿಂದ ಇದೇ ದಿನಾಂಕ 8 ರಂದು ಮೈಸೂರು-ದಾನಪುರ್ ಬೇಸಿಗೆ ವಿಶೇಷ ರೈಲನ್ನು (ಒಂದು ಟ್ರಿಪ್ ) ಓಡಿಸಲು ಕ್ರಮ ಕೈಗೊಂಡಿದ್ದು, ರೈಲು ಸಂಖ್ಯೆ 06216 ಮೈಸೂರಿನಿಂದ ಬೆಳಿಗ್ಗೆ 11 ಗಂಟೆಗೆ ಬಿಟ್ಟು, ಬೆಂಗಳೂರು ಕೆಎಸ್‍ಆರ್ ನಿಲ್ದಾಣದಿಂದ 13.25 ಗಂಟೆಗೆ ಆಗಮಿಸಲಿದೆ.

Post

ಯೂನಿಟ್ ಗೆ 10 ಕೆ.ಜಿ. ಅಕ್ಕಿ ನೀಡಲು ಮನವಿ

ರಾಜ್ಯ ಮತ್ತು ಕೇಂದ್ರ ಸರ್ಕಾರ ಪಡಿತರವನ್ನು ಒಂದು ಯೂನಿಟ್ ಗೆ 10 ಕೆ.ಜಿ.ಯಂತೆ ಉಚಿತ ವಿತರಣೆ ಮಾಡಲು ಕಾಂಗ್ರೆಸ್ ಮುಖಂಡರು, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ಒತ್ತಾಯಿಸಿದ್ದಾರೆ.

Post

ಹೊನ್ನಾಳಿ: ಸಿಡಿಲು ಬಡಿದು ಸಾವು

ಹೊನ್ನಾಳಿ ತಾಲ್ಲೂಕಿನ ಮಾದೇನಹಳ್ಳಿ ಜಮೀನಿನಲ್ಲಿ ಕುರಿ ಕಾಯುತ್ತಿದ್ದ ವ್ಯಕ್ತಿಗೆ ಸಿಡಿಲು ಬಡಿದು ಸಾವಿಗೀಡಾಗಿರುವ ಘಟನೆ ಇಂದು ಸಂಜೆ 5 ಗಂಟೆಗೆ ನಡೆದಿದೆ. ಶಿರ ತಾಲ್ಲೂಕು ಚಿತ್ರಲಿಂಗಯ್ಯ (24) ಎನ್ನುವ ವ್ಯಕ್ತಿ ಸಾವಿಗೀಡಾಗಿದ್ದಾನೆ.

Post

ಹೊನ್ನಾಳಿ: ವಲಸೆ ಬಂದವರಲ್ಲಿ 6 ಜನರಿಗೆ ಪಾಸಿಟಿವ್

ಹೊನ್ನಾಳಿ ತಾಲ್ಲೂಕಿಗೆ  ಬೆಂಗಳೂರು ಹಾಗೂ ಇತರೆಡೆಗಳಿಂದ  ಈವರೆಗೆ ಆಗಮಿಸಿದವರ ಸಂಖ್ಯೆ 406 ಜನರು. ಅದರಲ್ಲಿ 378 ಜನ ಬೆಂಗಳೂರಿನಿಂದ ಬಂದವರಾಗಿದ್ದು, 28 ಜನ ಹೊರರಾಜ್ಯ ಸೇರಿದಂತೆ ಇತರೆಡೆಗಳಿಂದ ಬಂದಿರುವುದಾಗಿ ತಹಶೀಲ್ದಾರ್ ಬಸನಗೌಡ ಕೋಟೂರ್ ಹೇಳಿದರು.

Post

ನಿಷೇಧಾಜ್ಞೆ ಮುಗಿಯುವವರೆಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ

ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ನಡೆಯುತ್ತಿದ್ದ ಲಸಿಕಾಕರಣ ವ್ಯವಸ್ಥೆಯನ್ನು ಇನ್ನು ಮುಂದೆ ಆ ಸ್ಥಳದ ಬದಲು ಚಿಗಟೇರಿ ಆಸ್ಪತ್ರೆ ಒಳಗಡೆ ಇರುವ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಕೊಠಡಿ ಸಂಖ್ಯೆ 34ರಲ್ಲಿ ಲಸಿಕಾಕರಣವನ್ನು ಮಾಡಲಾಗುವುದು.

Post

ದಾವಣಗೆರೆ ಅರ್ಬನ್ ಬ್ಯಾಂಕ್ ನಿರ್ವಹಣಾ ಮಂಡಳಿಗೆ ಟಿ.ಎಸ್.ಜಯರುದ್ರೇಶ್ ಅಧ್ಯಕ್ಷ

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ನೂತನವಾಗಿ `ನಿರ್ವಹಣಾ ಮಂಡಳಿ (ಬಿಒಎಂ)' ಯನ್ನು ರಚಿಸಲಾಗಿದ್ದು, ಈ ಮಂಡ ಳಿಯ ಅಧ್ಯಕ್ಷರಾಗಿ ಬ್ಯಾಂಕಿನ ಹಿರಿಯ ನಿರ್ದೇಶಕರ ಲ್ಲೊಬ್ಬರಾದ ಟಿ.ಎಸ್. ಜಯರುದ್ರೇಶ್ ಆಯ್ಕೆಯಾಗಿದ್ದಾರೆ.

Post

ಜಜಮು ವೈದ್ಯಕೀಯ ಕಾಲೇಜಿಗೆ ದಾಖಲೆಯ ಫಲಿತಾಂಶ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಈಚೆಗೆ ನಡೆಸಿದ ಕರ್ನಾಟಕದ ಪರೀಕ್ಷೆಯಲ್ಲಿ ನಗರದ  ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯವು ದಾಖಲೆಯ ಫಲಿತಾಂಶ ಪಡೆದಿದೆ. ತನ್ನ 55 ವರ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚು ಶೇಕಡ ತೇರ್ಗಡೆಯ ದಾಖಲೆ ಬರೆದಿದೆ. 

Post

ರಾಘವೇಂದ್ರ ಸ್ವಾಮಿ ದರ್ಶನ ಇಲ್ಲ

ಕೋವಿಡ್‌ ಎರಡನೇ ಅಲೆ ಹೆಚ್ಚಾಗಿರುವುದರಿಂದ ಹಾಗೂ ಸರ್ಕಾರದ ನಿಯ ಮದ ಪ್ರಕಾರ ಮಂತ್ರಾಲಯ ಕ್ಷೇತ್ರದಲ್ಲಿ ಇಂದಿನಿಂದ ಭಕ್ತರಿಗೆ ಪ್ರತ್ಯಕ್ಷ ದರ್ಶನ, ತೀರ್ಥ, ಪ್ರಸಾದಗಳಿಗೆ ಅವಕಾಶವಿರುವು ದಿಲ್ಲ.