ಭಗವಾನ್ ರಾಮಾನುಜಾಚಾರ್ಯರ ವೈಭವದ ರಥೋತ್ಸವ

ಭಗವಾನ್ ರಾಮಾನುಜಾಚಾರ್ಯರ ವೈಭವದ ರಥೋತ್ಸವ

ಹೊನ್ನಾಳಿ, ಮೇ 5-  ತಾಲ್ಲೂಕಿನ ಹಳೇದೇವರ ಹೊನ್ನಾಳಿ ಗ್ರಾಮದ ಭಗವಾನ್ ಶ್ರೀ ರಾಮಾನುಜಾಚಾರ್ಯರ ಮಠದಲ್ಲಿ ಗುರುವಾರ ಭಗವಾನ್ ಶ್ರೀ ರಾಮಾನುಜಾಚಾರ್ಯರ 1005ನೇ ಜಯಂತ್ಯುತ್ಸವ ಸಮಾರಂಭ, ಆಚಾರ್ಯರ 6ನೇ ವರ್ಷದ ಆಚರಣೆ ಮತ್ತು ಭಗವಾನ್ ಶ್ರೀ ರಾಮಾನುಜಾಚಾರ್ಯರ ನೂತನ ರಥೋತ್ಸವ ವೈಭವದಿಂದ ನೆರವೇರಿತು.

ಶ್ರೀ ಮಾಧವ ರಂಗನಾಥ ಸ್ವಾಮಿ, ಶ್ರೀ ಬಾಣ ದೇವರು ಪಾಲ್ಗೊಂಡಿದ್ದವು.  ಶಂಖಚಕ್ರ, ಮೂರು ನಾಮಗಳ ಅಲಂಕೃತ ಧ್ವಜಗಳನ್ನು ಹೊತ್ತ ಭಕ್ತರು ಶ್ರೀ ಭಗವಾನ್ ರಾಮಾನು ಜಾಚಾರ್ಯರಿಗೆ ಜಯಘೋಷ ಹಾಕುತ್ತಾ ರಥದೊಂದಿಗೆ ಸಾಗುತ್ತಿದ್ದರು. ಅಲಂಕೃತ ರಥವು ಶ್ರೀ ರಾಮಾನುಜಾ ಚಾರ್ಯರ ಮಠದ ಆವರಣದಿಂದ ಶ್ರೀ ಮಾಧವ ರಂಗನಾಥ ಸ್ವಾಮಿ ದೇವಸ್ಥಾನದವರೆಗೆ ಸಂಚರಿಸಿತು. ಅಲ್ಲಿಂದ ಪುನಃ ಶ್ರೀ ರಾಮಾನುಜಾಚಾರ್ಯರ ಮಠದ ಆವರಣಕ್ಕೆ ಬಂದು ತಲುಪಿತು.

ಪಂಚಲೋಹದ ನೂತನ ವಿಗ್ರಹ: ಶ್ರೀ ರಾಮಾನುಜಾಚಾರ್ಯರ ಪ್ರೇರಣೆಯಂತೆ ಆಚಾರ್ಯರ ರಥೋತ್ಸವವನ್ನು ಕಳೆದ 6 ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದು ಮಠದ ವ್ಯವಸ್ಥಾಪಕರಾದ ಎಸ್.ಕೆ. ಗೋಪಾಲಯ್ಯ ಹೇಳಿದರು. 

ಇದೇ ಸಂದರ್ಭದಲ್ಲಿ 55 ಕೆಜಿ ತೂಕದ ಪಂಚಲೋಹದ ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು ಎಂದು ಅವರು ತಿಳಿಸಿದರು.

ಭಗವಾನ್ ಶ್ರೀ ರಾಮಾನುಜಾಚಾ ರ್ಯರ ನೂತನ ರಥ ನಿರ್ಮಿಸಲು 20 ಲಕ್ಷ ರೂ.ಗಳಷ್ಟು ಹಣ ವಿನಿಯೋಗವಾಗಿದೆ. ಶ್ರೀ ರಾಮಾನುಜಾಚಾರ್ಯರ ಮಠದಲ್ಲಿ ಭಕ್ತರಿಗೆ ಅನೇಕ ಸವಲತ್ತುಗಳನ್ನು ಉಚಿತವಾಗಿ ಒದಗಿ ಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.