ಭಾನುವಳ್ಳಿ : ಗ್ರಾಮದೇವತೆ ಹಬ್ಬಕ್ಕೆ ಹಂದರ ಕಂಬ ಪೂಜೆ

ಭಾನುವಳ್ಳಿ : ಗ್ರಾಮದೇವತೆ ಹಬ್ಬಕ್ಕೆ ಹಂದರ ಕಂಬ ಪೂಜೆ

ಮಲೇಬೆನ್ನೂರು, ಏ.28- ಭಾನುವಳ್ಳಿ ಗ್ರಾಮದಲ್ಲಿ ಬರುವ ಮೇ 6ರಂದು ನಡೆಯಲಿರುವ ಶ್ರೀ ಕೆರೆ ಚೌಡೇಶ್ವರಿ ಉತ್ಸವ ಮತ್ತು ಮೇ 10, 11ಕ್ಕೆ ಹಮ್ಮಿಕೊಂಡಿರುವ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಹಬ್ಬದ ಅಂಗವಾಗಿ ಬುಧವಾರ ಹಂದರ ಕಂಬ ಪೂಜೆ ಮಾಡಿ, ಹಬ್ಬದ ಸಿದ್ಧತೆಗೆ ಚಾಲನೆ ನೀಡಲಾಯಿತು.

ಗ್ರಾಮದ ಮುಖಂಡರಾದ ಹೆಚ್.ಕೆ. ಕನ್ನಪ್ಪ, ಎಸ್.ಹೆಚ್. ಪಟೇಲ್, ಎಂ. ಕೊಟ್ರಪ್ಪ, ಟಿ. ಪುಟ್ಟಪ್ಪ, ಎ. ಮಹಾದೇವಪ್ಪ, ಮಲ್ಲಪ್ಪ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಪ್ರದೀಪ್‌ಗೌಡ, ಹೆಚ್. ಕರಿಯಪ್ಪ, ಬಾರ್ಕಿ ನಾರಾಯಣಪ್ಪ, ಬಾದಾಮಿ ಮಲ್ಲಿಕಾರ್ಜುನ, ಸಿ.ಎಸ್. ಹೇಮಂತರಾಜ್, ಎ.ಕೆ. ಮಂಜಪ್ಪ, ಎ.ಕೆ. ಜಯಪ್ಪ ಉಪಸ್ಥಿತರಿದ್ದರು. ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.