ಆನಗೋಡಿನಲ್ಲಿ `ಜಾನಪದ ಸಿರಿ’ ಉದ್ಘಾಟನೆ

ಆನಗೋಡಿನಲ್ಲಿ `ಜಾನಪದ ಸಿರಿ’ ಉದ್ಘಾಟನೆ

ದಾವಣಗೆರೆ, ಏ.17 – ತಾಲ್ಲೂಕಿನ ಆನಗೋಡ ಗ್ರಾಮದಲ್ಲಿ ನಿನ್ನೆ ನಡೆದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ  ಭಾನುವಾರ ಸಂಜೆ  ತರಳಬಾಳು ಕಲಾ ಸಂಘದಿಂದ  “ಜಾನಪದ ಸಿರಿ” ನಡೆಯಿತು. “ಜನತಾವಾಣಿ” ಸಂಪಾದಕ ಎಂ.ಎಸ್. ವಿಕಾಸ್ ಡೊಳ್ಳು ಭಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು.

ವೇದಿಕೆ ಮೇಲೆ ಜಿ.ಪಂ. ಸದಸ್ಯ ಬಸವಂತಪ್ಪ, ಶಿವಸೈನ್ಯ ಸಂಘದ ಗೌರವಾಧ್ಯಕ್ಷ ಶಶಿ ಹೆಮ್ಮನಬೇತೂರು, ಅಧ್ಯಕ್ಷ ಲಿಂಗರಾಜ್ ಅಗಸನಕಟ್ಟೆ, ಆನಗೋಡು ಗ್ರಾ.ಪಂ. ಅಧ್ಯಕ್ಷ ಮಾನಪ್ಪ, ಬಿಜೆಪಿ ಮುಖಂಡ ಬಿ.ಟಿ. ಸಿದ್ದಪ್ಪ, ಬಿ.ಎಸ್. ಶ್ಯಾಮ್, ಹನುಮಂತ ನಾಯ್ಕ, ಹೆಚ್.ಕೆ. ಬಸವರಾಜ್, ಕುಮಾರ್ ಸಿ.ಟಿ. ಕೊಟ್ರೇಶ್ ಆನಗೋಡು ಉಪಸ್ಥಿತರಿದ್ದರು. ಕುಮಾರ್ ಬಾವಿಹಾಳ್ ನಿರೂಪಿಸಿದರು. ಶಿಕ್ಷಕ ನಾರಪ್ಪ ಸ್ವಾಗತಿಸಿದರು