ಕರುಣಾಕರ ರೆಡ್ಡಿ ಷಷ್ಟ್ಯಬ್ದಿ : ಹರಪನಹಳ್ಳಿಗೆ ಸಿಎಂ

ಕರುಣಾಕರ ರೆಡ್ಡಿ ಷಷ್ಟ್ಯಬ್ದಿ : ಹರಪನಹಳ್ಳಿಗೆ ಸಿಎಂ

ಹರಪನಹಳ್ಳಿ, ಏ. 7- ಪಟ್ಟಣದ ಎಚ್.ಪಿ. ಎಸ್. ಕಾಲೇಜಿನ ಮೈದಾನದಲ್ಲಿ  ಏ.10ರಂದು ಸೀತಾರಾಮ ಕಲ್ಯಾಣ ಮಹೋತ್ಸವ ಹಾಗೂ ಶಾಸಕ ಜಿ.ಕರುಣಾಕರ ರೆಡ್ಡಿ ಅವರ 60ನೇ ವರ್ಷದ ಷಷ್ಟ್ಯಬ್ದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.

ಪಟ್ಟಣದ ಜಗಜೀವನ ರಾಂ ಸಮುದಾಯ ಭವನದಲ್ಲಿ  ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹರಪನಹಳ್ಳಿ ಮಂಡಲ ಅಧ್ಯಕ್ಷ  ಸತ್ತೂರು ಹಾಲೇಶ್  ಕಾರ್ಯಕ್ರಮದ ಮಾಹಿತಿ ನೀಡಿದರು.  

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ದಾವಣಗೆರೆ  ಸಂಸದ ಜಿ.ಎಂ. ಸಿದ್ದೇಶ್ವರ, ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಚಿವ ಜನಾರ್ಧನ ರೆಡ್ಡಿ, ಬಳ್ಳಾರಿ ಶಾಸಕ
ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾಗುವರು ಎಂದು ಅವರು ತಿಳಿಸಿದರು.

ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್ , ಪುರಸಭಾ ಸದಸ್ಯ ರೊಕ್ಕಪ್ಪ, ಜಾವೇದ್, ಬಿಜೆಪಿ ಮುಖಂಡ ಎಂ.ಪಿ.ನಾಯ್ಕ, ತಾ.ಪಂ ಮಾಜಿ ಉಪಾಧ್ಯಕ್ಷ ಮಂಜಾನಾಯ್ಕ, ಮುಖಂಡರಾದ ರಾಘವೇಂದ್ರಶೆಟ್ಟಿ, ಆರ್.ಲೋಕೇಶ್, ಆರ್.ಕರೇಗೌಡ, ಕಣವಿಹಳ್ಳಿ ಮಂಜುನಾಥ, ಲಿಂಬ್ಯಾನಾಯ್ಕ, ಬಿ.ವೈ.ವೆಂಕಟೇಶನಾಯ್ಕ, ಉದಯಕುಮಾರ, ಕಲ್ಲೇರ ಬಸವರಾಜ, ಯು.ಪಿ.ನಾಗರಾಜ ಹಾಗು ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.