ಎವಿಕೆ ಕಾಲೇಜು ರಸ್ತೆಯ ವ್ಯಾಪಾರಸ್ಥರಿಂದ ತ್ರಿವಿಧ ದಾಸೋಹಿಯ 115 ನೇ ಜಯಂತಿ

ಎವಿಕೆ ಕಾಲೇಜು ರಸ್ತೆಯ ವ್ಯಾಪಾರಸ್ಥರಿಂದ ತ್ರಿವಿಧ ದಾಸೋಹಿಯ 115 ನೇ ಜಯಂತಿ

ದಾವಣಗೆರೆ, ಏ.4- ಸಿದ್ದಗಂಗಾ ಮಠದ ಲಿಂ. ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ 115 ನೇ ಜಯಂತಿಯನ್ನು ನಿರಂಜನ್ ಪ್ರಿಂಟಿಂಗ್ ಪ್ರೆಸ್ ಆವರಣದಲ್ಲಿ ಎ.ವಿ.ಕೆ ಕಾಲೇಜು ರಸ್ತೆಯ ವ್ಯಾಪಾರಸ್ಥರು, ಸಾರ್ವಜನಿಕರು, ವಿದ್ಯಾರ್ಥಿಗಳು, ಹಿರಿಯರು ಸೇರಿ ಸಂಭ್ರಮದಿಂದ ಆಚರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂದೂಧರ್ ನಿಶಾನಿಮಠ್‌ ಮಾತನಾಡಿ, ಅಕ್ಷರ ದಾಸೋಹಿ, ಅನ್ನ ದಾಸೋಹಿ, ಜ್ಞಾನ ದಾಸೋಹಿ, ನಡೆದಾಡುವ ದೇವರು, ಈ ನಾಡು ಕಂಡ ಅಪರೂಪದ ವ್ಯಕ್ತಿ ಇವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಶ್ರೀಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರೆ ಆ ಪ್ರಶಸ್ತಿಗೇ ಒಂದು ಹಿರಿಮೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು. 

ಉನ್ನತಿ ಸಂಸ್ಥೆಯ ಪ್ರಾಂಶುಪಾಲ ಜಯರಾಜ್, ನಿರಂಜನ್ ನಿಶಾನಿಮಠ್ ಮಾತನಾಡಿದರು‌. ಎ.ವಿ.ಕೆ.ಕಾಲೇಜು ರಸ್ತೆಯ ವ್ಯಾಪಾರಸ್ಥರಾದ ಮುರಾರಿ ರಾವ್, ಮಂಜುನಾಥ, ಚಂದ್ರಹಾಸ್, ಲಕ್ಷ್ಮಣ, ನಟರಾಜ್, ಅಜಯ್ ಕುಮಾರ್, ದುರ್ಗೋಜಿರಾವ್, ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.