ಅಂತರ್‌ ಜಿಲ್ಲಾ ಕಳ್ಳರ ಬಂಧನ : 14 ಬೈಕ್‌ ವಶ

ಅಂತರ್‌ ಜಿಲ್ಲಾ ಕಳ್ಳರ ಬಂಧನ : 14 ಬೈಕ್‌ ವಶ

ಮಲೇಬೆನ್ನೂರು, ಏ.3- ಇಲ್ಲಿನ ಪೊಲೀಸ್‌ ಠಾಣೆಯ ಪೊಲೀಸರು ಮೂವರು ಅಂತರ್‌ ಜಿಲ್ಲಾ ಕಳ್ಳತನದ ಆರೋಪಿತರನ್ನು ಬಂಧಿಸಿ ಹರಪನಹಳ್ಳಿ, ದಾವಣಗೆರೆ, ಹೊನ್ನಾಳಿ, ಹರಿಹರ ಗ್ರಾಮಾಂತರ ಮತ್ತು ಶಿರಾಳಕೊಪ್ಪ ಪೊಲೀಸ್‌ ಠಾಣೆಗಳಲ್ಲಿ ನಡೆದಿದ್ದ ಒಟ್ಟು 18 ಪ್ರಕರಣಗಳನ್ನು ಭೇದಿಸಿ 7,41,500 ರೂ. ಬೆಲೆ ಬಾಳುವ ಓಮ್ನಿ ವ್ಯಾನ್‌ ಹಾಗೂ 66,500 ರೂ. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ದಾವಣಗೆರೆ ಜಿಲ್ಲಾ ಎಎಸ್ಪಿ ಆರ್‌.ಬಿ. ಬಸರಗಿ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಎಸ್ಪಿ ಸಿ.ಬಿ. ರಿಷ್ಯಂತ್‌ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್‌. ಬಸವರಾಜ್‌ ನೇತೃತ್ವದಲ್ಲಿ ಸಿಪಿಐ ಸತೀಶ್‌ಕುಮಾರ್‌ ಮತ್ತು ಮಲೇಬೆನ್ನೂರು ಪಿಎಸ್‌ಐ ರವಿಕುಮಾರ್‌, ಶಂಕರಗೌಡ ಪಾಟೀಲ್‌ ಮತ್ತು ಸಿಬ್ಬಂದಿ ಯವರ ತಂಡ ಕಳ್ಳರನ್ನು ಕಳುವಾದ ವಾಹನಗಳ ಸಮೇತ ಬಂಧಿಸುವಲ್ಲಿ ಶ್ರಮಿಸಿದ್ದಾರೆ ಎಂದು ಅಭಿನಂದಿಸಿದರು.

ಡಿವೈಎಸ್ಪಿ ಬಸರಗಿ, ಸಿಪಿಐ ಸತೀಶ್‌ಕುಮಾರ್‌, ಪಿಎಸ್‌ಐ ರವಿಕುಮಾರ್‌, ಶಂಕರಗೌಡ ಪಾಟೀಲ್‌, ಪ್ರೊಬೇಷನರಿ ಪಿಎಸ್‌ಐ ಶ್ರೀಪತಿ ಗಿನ್ನಿ. ಎಎಸ್‌ಐ ಬಸವರಾಜ್‌ ಸುದ್ಧಿಗೋಷ್ಠಿಯಲ್ಲಿದ್ದರು.