ಹೊನ್ನಾಳಿ ಪುರಸಭೆ ಉಳಿತಾಯ ಬಜೆಟ್

ಹೊನ್ನಾಳಿ, ಫೆ.28- ಇಲ್ಲಿನ ಪುರಸಭೆಯ ಸರ್ವ ಸದಸ್ಯರ ಸಭೆಯಲ್ಲಿ ಆಯ-ವ್ಯಯ ಮಂಡನೆಯ ಹೊತ್ತಿಗೆಯನ್ನು  ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬಿಡುಗಡೆ ಮಾಡಿದರು.

ಪಟ್ಟಣದ ಜನತೆಯ ನಿರೀಕ್ಷೆಗಳು ಬಹಳಷ್ಟು ಇರುತ್ತವೆ. ನಿರೀಕ್ಷೆಗಳಿಗೆ ಸ್ಪಂದಿಸಿ ಜನಪ್ರತಿನಿಧಿಗಳು ಕಾರ್ಯ ಪ್ರವೃತ್ತರಾಗಬೇಕು ಹಾಗೂ ಬಜೆಟ್‍ನಲ್ಲಿ ಸಾಮಾನ್ಯ ಜನರ ಬೇಡಿಕೆಗಳು ಈಡೇರುವ ಅಂಶಗಳು ಅಡಕವಾಗಿರಬೇಕು ಎಂದು ಅವರು ಸಲಹೆ ನೀಡಿದರು.  ಪುರಸಭೆಯ ಎಲ್ಲಾ ಸದಸ್ಯರು ಬಜೆಟ್‍ನಲ್ಲಿ ಮಂಡನೆ ಯಾದ ಅಂಶಗಳನ್ವಯ ವಿಳಂಬ ನೀತಿ ಅನುಸರಿಸದೆ ಕಾರ್ಯಪ್ರವೃತ್ತರಾಗಿ ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃ ದ್ಧಿಗೆ ಒತ್ತು ಕೊಡಬೇಕು ಎಂದು ಶಾಸಕರು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಬಾಬು ಹೋಬಳದಾರ್, ಬಜೆಟ್‍ನ ಮುಖ್ಯಾಂಶಗಳ ಬಗ್ಗೆ ಮಾತನಾಡಿ, 2022-23ನೇ ಸಾಲಿನ ಬಜೆಟ್‍ನಲ್ಲಿ ರೂ. 2438243 ನಿವ್ವಳ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಪುರಸಭೆ  ಉಪಾಧ್ಯಕ್ಷರಾದ ರಂಜಿತಾ ಚನ್ನಪ್ಪ, ಮಾಜಿ ಅಧ್ಯಕ್ಷ ಕೆ.ವಿ.ಶ್ರೀಧರ, ಸದಸ್ಯರಾದ ಬಾವಿಮನೆ     ರಾಜಪ್ಪ, ರಂಗಪ್ಪ, ಸವಿತಾ ಮಹೇಶ್‌ ಹುಡೇದ್,  ಸುಮಾ ಮಂಜುನಾಥ್‌ ಇಂಚರ, ಅನುಚಂದ್ರು   ಗುಂಡಾ, ಸುಮಾ ಸತೀಶ್, ಪದ್ಮ ಪ್ರಶಾಂತ್, ಉಷಾ ಗಿರೀಶ್, ಎಂ.ಸುರೇಶ್, ಧರ್ಮಪ್ಪ, ರಾಜೇಂದ್ರ, ತನ್ವಿರ್‌ ಅಹ್ಮದ್, ನಾಮಿನಿ ಸದಸ್ಯರಾದ ಕುಮಾರ, ಸೌಮ್ಯ, ಕೃಷ್ಣಮೂರ್ತಿ, ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಪ್ಪ, ಇಂಜಿನಿಯರ್ ದೇವರಾಜ್  ಇದ್ದರು.