ಪಂಡಿತಾರಾಧ್ಯ ಶ್ರೀಗಳಿಗೆ ರಾಷ್ಟ್ರೀಯ `ಕನ್ನಡ ಭಾರತಿ ರಂಗ ಪ್ರಶಸ್ತಿ’ ಇಂದು ಪ್ರದಾನ

ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ದೆಹಲಿ ಕರ್ನಾಟಕ ಸಂಘ ತನ್ನ ಈ ಬಾರಿಯ ರಾಷ್ಟ್ರೀಯ `ಕನ್ನಡ ಭಾರತಿ ರಂಗ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ. 

ರಂಗಭೂಮಿಯಲ್ಲಿ ಮಹತ್ತರ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸುವ ಸಂಪ್ರದಾಯವನ್ನು ಕರ್ನಾಟಕ ಸಂಘ 2015 ರಿಂದ ನಡೆಸಿಕೊಂಡು ಬರುತ್ತಿದೆ. 

ಟಿ. ಎಸ್. ನಾಗಾಭರಣ, ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ಹೆಚ್. ಎಸ್. ಶಿವಪ್ರಕಾಶ್ ಅವರನ್ನೊಳಗೊಂಡ ಸಮಿತಿಯು  ಈ ಆಯ್ಕೆ ಮಾಡಿದೆ. ಪ್ರಶಸ್ತಿಯು 50 ಸಾವಿರ ರೂಪಾಯಿಗಳ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಗಳನ್ನು ಹೊಂದಿರುತ್ತದೆ. ಇಂದು ಸಂಜೆ 5 ಗಂಟೆಗೆ ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.