ಹೊಸ ಚಿಕ್ಕನಹಳ್ಳಿ ಕಾಮಗಾರಿಗೆ ಗುದ್ದಲಿ ಪೂಜೆ

ಹೊಸ ಚಿಕ್ಕನಹಳ್ಳಿ ಕಾಮಗಾರಿಗೆ ಗುದ್ದಲಿ ಪೂಜೆ

ದಾವಣಗೆರೆ, ಫೆ.13- ಶಾಸಕ ಎಸ್.ಎ. ರವೀಂದ್ರನಾಥ್ ಅವರು ಹೊಸ ಚಿಕ್ಕನಹಳ್ಳಿಯಲ್ಲಿ ಬಾಕ್ಸ್ ಚರಂಡಿ ಹಾಗೂ ರಸ್ತೆ ಅಭಿವೃದ್ಧಿಯ 1.10 ಕೋಟಿ ರೂ.ಗಳ ವಿವಿಧ ಕಾಮಗಾರಿ ಗಳಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ 30ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಜಯ್ಯಮ್ಮ ಗೋಪಿನಾಯ್ಕ, ಬಿಜೆಪಿ ಮುಖಂಡರುಗಳಾದ ಗೋಪಿನಾಯ್ಕ, ಎಂ.ರೇವಣಸಿದ್ದಪ್ಪ, ಕೆ.ಎಸ್.ಮಂಜುನಾಥ್, ಸಿ.ಜಿ.ನಾಗರಾಜಪ್ಪ, ಕಲ್ಲಣ್ಣ, ಚಂದ್ರಶೇಖರ್, ರವಿಕುಮಾರ್ ಹಾಗೂ ಚಿಕ್ಕನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.