ಆರೋಪಗಳು ಸತ್ಯಕ್ಕೆ ದೂರ: ಸ್ಪಷ್ಟನೆ

ಹೊನ್ನಾಳಿ, ಫೆ.11-  ಮಾಜಿ ಶಾಸಕ ಡಿ.ಜಿ.ಶಾಂತನ ಗೌಡ ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಹತಾಶೆ ಮನೋಭಾವದ ಆರೋಪಗಳು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಮ್ಮ ನಿವಾಸ ದಲ್ಲಿಂದು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ, ಮಾಜಿ ಶಾಸಕರ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಿದರು.

ನೇರಲಗುಂಡಿಯ ಕೆರೆ ಕಾಮಗಾರಿಯಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ. 4 ರಿಂದ 5 ಎಕರೆ ವಿಸ್ತೀರ್ಣದ ಕೆರೆಯನ್ನು ತಾವೇ ಅಭಿವೃದ್ಧಿಪಡಿಸಿದ್ದು,  ಅಲ್ಲಿನ ಗ್ರಾಮಸ್ಥರಿಗೆ ಅನುಕೂಲವಾಯಿತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಹ್ವಾನದ ಮೇರೆಗೆ ಕೆರೆಯ ಮಣ್ಣನ್ನು ತಮ್ಮ ಜಮೀನಿಗೆ ಸಾಗಿಸಲು ಮುಂದಾಗಿದ್ದಾಗಿ ಹೇಳಿದರು.

ನೇರಲಗುಂಡಿ ಕೆರೆಯಲ್ಲಿನ ಮಣ್ಣನ್ನು ತಮ್ಮ ಜಮೀನಿಗೆ ಖಾಸಗಿಯಾಗಿ ಹೇರಿಸಿಕೊಂಡಿದ್ದೇವೆಯೇ ಹೊರತು ಸರ್ಕಾರದ ಹಣದಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್, ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ್, ಮಾಜಿ ಅಧ್ಯಕ್ಷ ಕೆ.ವಿ.ಶ್ರೀಧರ್, ಸದಸ್ಯರಾದ ಕಿಟ್ಟಿ ಮುರಾರಿ, ಬಡಾವಣೆ ರಂಗಪ್ಪ, ತಾಲ್ಲೂಕು ಮಾಜಿ ಅಧ್ಯಕ್ಷ ಕೆ.ಎಲ್.ರಂಗಪ್ಪ, ಎಪಿಎಂಸಿ ಸದಸ್ಯ ಕೆ.ಪಿ.ಕುಬೇಂದ್ರಪ್ಪ, ತಾಂಡಾಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ್ ಬಿಜೆಪಿ ಮುಖಂಡರಾದ ಇಂಚರ ಮಂಜು, ಮಹೇಶ್ ಹುಡೇದ್, ಸತೀಶ್, ಗುಂಡ ಚಂದ್ರು, ಜೆಸಿಬಿ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.