ಎಂಸಿಸಿ ಬಿ ಬ್ಲಾಕ್‌ನಲ್ಲಿ 20 ಲಕ್ಷ ರೂ. ವೆಚ್ಚದ ಸಿಸಿ ಕಾಮಗಾರಿಗೆ ಶಂಕುಸ್ಥಾಪನೆ

ಎಂಸಿಸಿ ಬಿ ಬ್ಲಾಕ್‌ನಲ್ಲಿ 20 ಲಕ್ಷ ರೂ. ವೆಚ್ಚದ ಸಿಸಿ ಕಾಮಗಾರಿಗೆ ಶಂಕುಸ್ಥಾಪನೆ

ದಾವಣಗೆರೆ, ಫೆ.8- ನಗರದ ಎಂಸಿಸಿ `ಬಿ’ ಬ್ಲಾಕ್‌ನ ತರಳಬಾಳು ಶಾಲೆ ಮತ್ತು ಪದವಿ ಕಾಲೇಜಿನ ಸಿಸಿ ರಸ್ತೆ ಕಾಮಗಾರಿಗೆ ಮಹಾಪೌರ ಎಸ್.ಟಿ. ವೀರೇಶ್ ಅವರು ಚಾಲನೆ ನೀಡಿದರು. 

ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಡೆಸಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮವೂ ನೆರವೇರಿತು. 

ಶಾಸಕ ಎಸ್.ಎ.ರವೀಂದ್ರನಾಥ್, 38 ನೇ ವಾರ್ಡಿನ ಪಾಲಿಕೆ ಸದಸ್ಯ ಜಿ. ಎಸ್. ಮಂಜುನಾಥ್, ಪಾಲಿಕೆಯ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯರುಗಳಾದ ಪ್ರಸನ್ನ ಕುಮಾರ್, ಜಯಮ್ಮ ಗೋಪಿನಾಥ್, ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದಜ್ಜಿ, ಎಇ ಪ್ರದೀಪ್, ಎಇಇ ಮಧುಸೂದನ್, ಕಾಲೇಜಿನ ಉಪಪ್ರಾಂಶುಪಾಲ ವೀರೇಶ್, ಪರಮೇಶ್ವರ ಗೌಡರು, ಕುಸುಮ ಶೆಟ್ಟರು, ಜಾವೇದ್ ಸಾಬ್, ಸಿದ್ದೇಶಿ, ಪರಶುರಾಮಪ್ಪ, ಆಲೂರು ಪುಟ್ಟಣ್ಣ, ಮುರುಗೇಶ್ ಮಂತ್ರಿ, ಜಿ.ಎನ್.ಸತೀಶ್, ನೀಲಕಂಠ, ಪ್ರಕಾಶ್ ಕಬ್ಬೂರು, ಪ್ರಕಾಶ್ ವಾಟರ್ ಪಾಯಿಂಟ್, ಪ್ರಮೋದ್, ಕಂಟ್ರ್ಯಾಕ್ಟರ್ ಚಂದ್ರಶೇಖರಪ್ಪ, ಅಶೋಕ್‌, ಮಂಜುನಾಥ್‌, ನಾಗರಾಜ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.