ಆಡಳಿತ ಪಕ್ಷದಿಂದ ದೇಶದ ಐಕ್ಯತೆಗೆ ಧಕ್ಕೆ

ಆಡಳಿತ ಪಕ್ಷದಿಂದ ದೇಶದ ಐಕ್ಯತೆಗೆ ಧಕ್ಕೆ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್‌.ಬಿ. ಮಂಜಪ್ಪ

ದಾವಣಗೆರೆ, ಜ. 27- ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಡಾ|| ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಭವನದಲ್ಲಿ 73ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಎಲ್ಲಾ ಜಾತಿ-ಧರ್ಮಗಳಿಗೆ ಅನ್ವಯ ವಾಗು ವಂತೆ ಭಾರತ ಸಂವಿಧಾನ ರಚನೆ ಯಾದರೂ ಸಹ ಇಂದು ಅಧಿಕಾರದಲ್ಲಿರುವ ಕೆಲವರು ಒಂದು ಜಾತಿ-ಧರ್ಮಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸುವ ಮೂಲಕ ದೇಶದ ಐಕ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಎಸ್ಸಿ ಘಟಕದ ಅಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಗುರುರಾಜ್, ಜಿಲ್ಲಾ ಉಪಾಧ್ಯಕ್ಷ ಹೆಚ್.ಜಯಣ್ಣ, ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರಾದ ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಶ್ರೀಮತಿ ಸವಿತಾ ಹುಲ್ಮನಿ ಗಣೇಶ್, ಶ್ರೀಮತಿ ಶಿವಲೀಲಾ ಕೊಟ್ರಯ್ಯ,  ಶ್ರೀಮತಿ ಮೀನಾಕ್ಷಿ ಜಗದೀಶ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹರೀಶ್ ಕೆ.ಎಲ್.ಬಸಾಪುರ, ಜಿಲ್ಲಾ ಸೇವಾದಳದ ಜಿಲ್ಲಾಧ್ಯಕ್ಷ ಚಂದ್ರು ಡೋಲಿ, ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ,  ಮಹಿಳಾ ಕಾಂಗ್ರೆಸ್‍ನ ಶ್ರೀಮತಿ ಸುಷ್ಮಾ ಪಾಟೀಲ್, ಶ್ರೀಮತಿ ನಾಗರತ್ನಮ್ಮ, ಶ್ರೀಮತಿ ರಾಜೇಶ್ವರಿ, ಶ್ರೀಮತಿ ಗೀತಾ ಪ್ರಶಾಂತ್, ಶ್ರೀಮತಿ ದ್ರಾಕ್ಷಾಯಣಮ್ಮ, ಶ್ರೀಮತಿ ಆಶಾಮುರುಳಿ, ಶ್ರೀಮತಿ ಕವಿತಾ ಚಂದ್ರಶೇಖರ್, ಶ್ರೀಮತಿ ಶುಭಮಂಗಳ, ಶ್ರೀಮತಿ ಉಮಾದೇವಿ, ಶ್ರೀಮತಿ ಗೀತಾ ಚಂದ್ರಶೇಖರ್, ಕಿಸಾನ್ ಘಟಕದ ಹಾಲೇಶ್, ಸೇವಾದಳ ರಮೇಶ್, ಮುಖಂಡರುಗಳಾದ ಉಮಾಶಂಕರ್, ರಾಕೇಶ್.ಜಿ, ಅಬ್ದುಲ್ ಜಬ್ಬಾರ್, ಮಹ್ಮದ್ ಜಿಕ್ರಿಯಾ, ಸಿದ್ದೇಶ್, ಲಿಯಾಖತ್ ಅಲಿ, ಜಗದೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.