ಬೈಪಾಸ್‌ನಲ್ಲಿ ರಸ್ತೆ ಅಪಘಾತ ಸಾವು, ಓರ್ವನ ಸ್ಥಿತಿ ಗಂಭೀರ

ದಾವಣಗೆರೆ, ಜ.26- ಟೈರ್ ಸ್ಫೋಟಗೊಂಡ ಪರಿಣಾಮ ಒಣ ಮೆಣಸಿನಕಾಯಿ ಸಾಗಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಓರ್ವ ವ್ಯಾಪಾರಿ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರಭಾಗದ ಶಾಮನೂರು ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಇಂದು ಸಂಭವಿಸಿದೆ. 

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ರಾಂಪುರದ ಲಾಲ್ ಸ್ವಾಮಿ (45) ಮೃತ ವ್ಯಾಪಾರಿ. ರಾಮಾಂಜನೇಯನ ಸ್ಥಿತಿ ಗಂಭೀರವಾಗಿದೆ. ತಮ್ಮ ಊರಾದ ಆಂಧ್ರದ ಅನಂತಪುರ ಜಿಲ್ಲೆ ವೈ. ರಾಂಪುರದಿಂದ ಬ್ಯಾಡಗಿಗೆ ಒಣ ಮೆಣಸಿನಕಾಯಿ ಮಾರಾಟ ಮಾಡಲು ನಾಲ್ವರು ವ್ಯಾಪಾರಿಗಳು ಟಾಟಾ ಏಸ್ ವಾಹನದಲ್ಲಿ ಮೆಣಸಿನ ಕಾಯಿ ತುಂಬಿದ ಚೀಲಗಳನ್ನು ಹೇರಿಕೊಂಡು ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ ರಾಸ್ತಾ ಹೋಟೆಲ್ ಮುಂಭಾಗದಲ್ಲಿ ಏಕಾಏಕಿ ಟಾಟಾ ಏಸ್ ನ ಟೈರ್ ಸ್ಫೋಟಗೊಂಡಿದೆ. ಬಳಿಕ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ವಾಹನದಡಿ ಸಿಲುಕಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡರು. ಗಾಯಾಳುಗಳನ್ನು ಕೂಡಲೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿಯಿತು. ಆದರೂ ಓರ್ವ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.