ಜಗಳೂರು : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಜಗಳೂರು : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಜಗಳೂರು,ಜ.26- ತಾಲ್ಲೂಕಿನ ಬಿಳಿಚೋಡು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿಗಳಿಗೆ, ಬಿಳಿಚೋಡು ಶೆಟ್ರು ಕಲಿವೀರಪ್ಪ ಮತ್ತು ಚನ್ನಬಸಮ್ಮ ಮನೋಲಿ  ಟ್ರಸ್ಟ್ ಹಾಗು ದಾವಣಗೆರೆ ರೋಟರಿ ಕ್ಲಬ್ ವತಿಯಿಂದ ನೀಡಲಾದ  ವಿದ್ಯಾಸೇತು ಪುಸ್ತಕಗಳನ್ನು ವಿತರಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ, ರೋಟರಿ ಮಾಜಿ ರಾಜ್ಯಪಾಲ ಎಸ್.ಕೆ.ವೀರಣ್ಣ, ಪಿ.ಬಿ. ಪ್ರಕಾಶ್, ಮುಖ್ಯೋಪಾಧ್ಯಾಯಿನಿ ವೀರಮ್ಮ ಮತ್ತಿತರರು ಉಪಸ್ಥಿತರಿದ್ದರು.