ಕರ್ಫ್ಯೂ ರದ್ದು : ಛೇಂಬರ್ ಆಫ್ ಕಾಮರ್ಸ್ ಸ್ವಾಗತ

ದಾವಣಗೆರೆ, ಜ.21- ಕೊರೊನಾ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ  ಹಾಗೂ ಜಿಲ್ಲಾಡಳಿತ ಜಾರಿಗೊಳಿ ಸಿದ್ದ ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸಿರುವ ಕ್ರಮವನ್ನು ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸ್ವಾಗತಿಸಿದೆ.

ಕೋವಿಡ್ ನಿರ್ವಹಣೆಗಾಗಿ ಸರ್ಕಾರದ ಆದೇಶ ದಂತೆ ಜಿಲ್ಲಾಡಳಿತವೂ ಸಹ ರಾತ್ರಿ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಕ್ರಮ ಕೈಗೊಂಡಿತ್ತು. ಸಾಕಷ್ಟು ಸಂಕಷ್ಟಗಳ ಹೊರತಾಗಿಯೂ ಸಾರ್ವಜನಿ ಕರು ಹಾಗೂ ಜಿಲ್ಲೆಯ ವಾಣಿಜ್ಯೋದ್ಯಮಿಗಳು ಸರ್ಕಾರದ ಆದೇಶ ಪಾಲಿಸಿದ್ದರು. ಇದೀಗ ಸರ್ಕಾರ ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸಿರುವುದು ಸ್ವಾಗ ತಾರ್ಹ. ಇದರಿಂದಾಗಿ ಅಂದಿನ ದಿನವೇ ದುಡಿದು ಜೀವನ ಸಾಗಿಸುವ ಶ್ರಮಿಕ ವರ್ಗ ಸೇರಿದಂತೆ ಕೈಗಾರಿಕಾ ಸಮೂಹಕ್ಕೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ ಛೇಂಬರ್ ಆಫ್ ಕಾಮರ್ಸ್‌ನ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಅಭಿನಂದಿಸಿದ್ದಾರೆ.