ಸೈಕಲ್‌ಗೆ ಕಾರು ಡಿಕ್ಕಿ: ಸವಾರನಿಗೆ ಗಾಯ

ದಾವಣಗೆರೆ, ಜ.17-  ನಗರದ ಡೆಂಟಲ್ ಕಾಲೇಜು ಬಳಿಯ  ಬಾಲಕರ ವಸತಿ ನಿಲಯದ ಬಳಿ ಕಾರೊಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ರಾತ್ರಿ 10.15ರ ವೇಳೆಗೆ ನಡೆದಿದೆ. ಸೈಕಲ್ ಮುಂಭಾಗ ಜಖಂಗೊಂಡಿದ್ದು, ಸವಾರ ಗಾಯಗೊಂಡಿದ್ದಾನೆ. 

ಸ್ಥಳದಲ್ಲಿದ್ದ ಸಾರ್ವಜನಿಕರು ಸೈಕಲ್ ಸವಾರನ ಸಹಾಯಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.   ಈ ವೇಳೆ ಕಾರಿನ ಚಾಲಕ ಅಪಘಾತ ಮಾಡಿ ಸೌಜನ್ಯದಿಂದ ವರ್ತಿಸದೆ 200 ರೂ.ಗಳನ್ನು ನೀಡಿ ತೆರಳಿರುವುದಾಗಿ ಸೈಕಲ್ ಸವಾರ ಸ್ಥಳೀಯರಿಗೆ ವಿವರಿಸಿದ್ದಾನೆ.

ಹಣದ ದರ್ಪದಿಂದ ಮಾನವೀಯತೆ ಮರೆತ ಕಾರಿನ ಚಾಲಕನನ್ನು ಪತ್ತೆ ಹಚ್ಚಿ, ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.