ಬಿಐಇಟಿ ಕಾಲೇಜಿಗೆ `ಅಟಲ್ ರ್ಯಾಂಕ್’ ಮನ್ನಣೆ

ದಾವಣಗೆರೆ, ಜ. 13- ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯಕ್ಕೆ `ಅಟಲ್ ರಾಂಕ್’ ಅಡಿಯಲ್ಲಿ ಮನ್ನಣೆ ದೊರೆತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್ ತಿಳಿಸಿದ್ದಾರೆ.

ದೇಶದ ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ 2020-21 ನೇ ಸಾಲಿನಲ್ಲಿ ಬ್ಯಾಂಡ್-ಪರ್‌ಫಾರ್ಮರ್ ಮಾನ್ಯತಾ ಪ್ರಮಾಣ ಪತ್ರವನ್ನು ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯವು `ಅಟಲ್ ರಾಂಕ್’ ಅಡಿಯಲ್ಲಿ ನೀಡಿದೆ ಎಂದು ಕಾಲೇಜಿನ ಸಾರ್ವಜನಿಕ ಸಂಪರ್ಕ ಡೀನ್ ಡಾ. ಜಿ.ಪಿ. ದೇಸಾಯಿ ವಿವರಿಸಿದ್ದಾರೆ. 

ಈ ಮನ್ನಣೆಯು ಬಿಐಇಟಿ ಕಾಲೇಜಿನ ಸಾಧನೆಗೆ ಹೆಮ್ಮೆಯ ಗರಿಯನ್ನು ಮೂಡಿಸಿದೆ. ಕಾಲೇಜಿನ ಸಾಧನೆಗೆ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ  ಶಾಮನೂರು ಮಲ್ಲಿಕಾರ್ಜುನ್ ಅಭಿನಂದಿಸಿದ್ದಾರೆ.