ಸ್ಕೌಟ್ಸ್ ವಿದ್ಯಾರ್ಥಿಗಳಿಂದ `ಕರ್ನಾಟಕ ದರ್ಶನ’

ಸ್ಕೌಟ್ಸ್ ವಿದ್ಯಾರ್ಥಿಗಳಿಂದ  `ಕರ್ನಾಟಕ ದರ್ಶನ’

ದಾವಣಗೆರೆ, ನ.30- ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ದಕ್ಷಿಣ ವಲಯ ಹಾಗೂ ನೇತಾಜಿ ಸ್ಕೌಟ್ ಗ್ರೂಪ್ ಚೇತನ ಗೈಡ್ ಗ್ರೂಪ್ ವತಿಯಿಂದ `ಕರ್ನಾಟಕ ದರ್ಶನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ಪಿ.ಜೆ. ಬಡಾವಣೆಯ ಬಾಪೂಜಿ ಶಾಲೆ ಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎ.ಪಿ. ಷಡಾಕ್ಷರಪ್ಪ, ಮೆಹಬೂಬ್ ಅಲಿ, ಶ್ರೀಮತಿ ರತ್ನಮ್ಮ, ಶ್ರೀಮತಿ ಕೊಟ್ರಮ್ಮ ಉಪಸ್ಥಿತರಿದ್ದರು. ಎ.ಆರ್. ಉಜ್ಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಾಜ್ಯದ ಹಲವು ಜಿಲ್ಲೆಗಳ ಮಹತ್ವವನ್ನು  ತಿಳಿಸಿಕೊಟ್ಟರು. ಇದಕ್ಕೂ ಮುನ್ನ ನಾಡ ದೇವತೆಗೆ ಪೂಜೆ ಸಲ್ಲಿಸಿ ಕಲಾ ತಂಡಗಳ ಮೆರವಣಿಗೆ ನಡೆಯಿತು.