15ನೇ ವಾರ್ಡ್‌ನಲ್ಲಿ ಪುನೀತ್‌ಗೆ ಶ್ರದ್ಧಾಂಜಲಿ

15ನೇ ವಾರ್ಡ್‌ನಲ್ಲಿ ಪುನೀತ್‌ಗೆ ಶ್ರದ್ಧಾಂಜಲಿ

ದಾವಣಗೆರೆ, ನ. 12- ನಗರದ 15ನೇ ವಾರ್ಡ್ ನ ದೇವರಾಜ ಅರಸು ಬಡಾವಣೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಮೇಣದ ಬತ್ತಿ ಹಿಡಿದು ಬಡಾವಣೆಯ ಮಕ್ಕಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು.

ವಾರ್ಡ್ ನ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಕೆ.ಎಂ. ವೀರಯ್ಯ ಸ್ವಾಮಿ, ನಟರಾಜ್, ಕುಮಾರ್, ಮಂಜು ಸೋಲಾರ್, ರಘು, ದುಗ್ಗೇಶ್, ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.