ಬಂಗಾರದಿಂದ ಸುಖ ಸಿಗುವುದಿಲ್ಲ, ಬದುಕೇ ಬಂಗಾರದಂತಿರಬೇಕು

ಬಂಗಾರದಿಂದ ಸುಖ ಸಿಗುವುದಿಲ್ಲ, ಬದುಕೇ ಬಂಗಾರದಂತಿರಬೇಕು

ಹಲಸಬಾಳು : ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ವಿಶ್ಲೇಷಣೆ 

ಮಲೇಬೆನ್ನೂರು, ಅ.18- ಸತ್ಯ, ಅಹಿಂಸೆ, ಪ್ರಾಮಾ ಣಿಕತೆ, ಸಹಕಾರ, ಪ್ರೀತಿ, ತ್ಯಾಗ ಎಂಬ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅಂತರಂಗ, ಬಹಿರಂಗ ಶುದ್ಧಿಯಾಗಿ ಬದುಕಿಗೊಂದು ಭವ್ಯತೆ ಬರು ತ್ತದೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದರು.

ಹರಿಹರ ತಾಲ್ಲೂಕು ಹಲಸಬಾಳು ಗ್ರಾಮದಲ್ಲಿ ಇಂದು ಏರ್ಪಾಡಾಗಿದ್ದ ಶ್ರೀ ತರಳಬಾಳು ಯುವಕ ಹಾಗೂ ಮಹಿಳಾ ಸಂಘಗಳ ಗ್ರಾಮ ಘಟಕಗಳ ಉದ್ಘಾಟನೆ ಮತ್ತು ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ಜೊತೆಗೆ ಭರಮಸಾಗರ ಏತ ನೀರಾವರಿ ಯೋಜನೆಗೆ ಭೂಮಿ ಕೊಟ್ಟ ರೈತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ಬಂಗಾರದಿಂದ ಸುಖ ಸಿಗುವುದಿಲ್ಲ. ನಮ್ಮ ಬದುಕೇ ಬಂಗಾರವಾಗಿರಬೇಕು. ಈ ನಿಟ್ಟಿನಲ್ಲಿ ಸದ್ಗುಣಗಳನ್ನು ಮೈಗೂಡಿಸಿಕೊಂಡರೆ, ಮನುಷ್ಯನೇ ಬಂಗಾರವಾಗುತ್ತಾನೆ. ಪಕ್ಕೀರರಂತೆ ಬದುಕಿ, ಜಗತ್ತಿಗೆ ಸಂದೇಶ ನೀಡಿದ ಗಾಂಧೀ, ಬುದ್ಧ, ಯೇಸು, ಪೈಗಂಬರ್ ಅವರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಅದಕ್ಕೆ ಕಾರಣ ಅವರು ಮೊದಲು ತಮ್ಮಲ್ಲಿ ಪರಿವರ್ತನೆ ಮಾಡಿಕೊಂಡು ನಂತರ ಸಮಾಜಕ್ಕೆ ಒಳ್ಳೆಯ ಆಚಾರ, ವಿಚಾರ ನೀಡಿದರು ಎಂದು ಶ್ರೀಗಳು ತಿಳಿಸಿದರು.

ನಾವೂ ಕೂಡಾ ಮನುಷ್ಯತ್ವ ಮೈಗೂಡಿಸಿಕೊಂಡರೆ ಮಾತ್ರ ಮೌಲ್ಯಗಳು ಉಳಿಯುತ್ತವೆ. ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಮನುಷ್ಯನ ಮನಸ್ಸನ್ನು ಸ್ವಚ್ಛಗೊಳಿಸಲೆಂದೇ ಶರಣರು ನೀಡಿದ ಸಪ್ತ ಸೂತ್ರಗಳನ್ನು ಬದುಕಿನಲ್ಲಿ ಪಾಲಿಸಿದಾಗ ಬದುಕು ಸುಂದರವಾಗಿರುತ್ತದೆ ಎಂದು ಸ್ವಾಮೀಜಿ ಸ್ವಾಮೀಜಿ ಪ್ರತಿಪಾದಿಸಿದರು.

ಮನುಷ್ಯ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ ಎಂಬ ಈ ತತ್ವಗಳನ್ನು ಸರಿಯಾಗಿ ಪಾಲನೆ ಮಾಡಿದರೆ, ಬದುಕಿನಲ್ಲಿ ಪರಿವರ್ತನೆ ಆಗುವುದರ ಜೊತೆಗೆ ಗ್ರಾಮದ ಕಲ್ಯಾಣಕ್ಕೆ ಸಹಕಾರಿ ಆಗುತ್ತದೆ ಎಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದ ಶ್ರೀಗಳು, ನಾವು ಬಹಳ ಜನ ಇದ್ದೇವೆ ಎಂದು ಊರಿನಲ್ಲಿ ದಬ್ಬಾಳಿಕೆ ನಡೆಸಿದರೆ, ಇಷ್ಟಲಿಂಗ ಧರಿಸುವುದು ವ್ಯರ್ಥ ಎಂದು ನೇರವಾಗಿ ಎಚ್ಚರಿಸಿದರು.

ಗುಟ್ಕಾ ಹಾಕುವ ಬಾಯಲ್ಲಿ ಶಿವನಾಮ ಸ್ಮರಣೆ ಮಾಡಿ, ಬೈಕ್‌ ರಾಲಿ ಮಾಡಬೇಡಿ, ಕಾಲ,ಕಾಸು, ಕಾರ್ಯಕ್ಕೆ ಮನ್ನಣೆ ಕೊಡಿ ಎಂದು ಯುವಕರಿಗೆ ಸಂದೇಶ ನೀಡಿದರು.

 ಜಿಲ್ಲಾ ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ. ಮಂಜುನಾಥ್ ಕುರ್ಕಿ ಮಾತನಾಡಿ, ಮನುಕುಲದ ಉದ್ಧಾರ ಸಮಾನತೆಯಿಂದ ಮಾತ್ರ ಸಾಧ್ಯ ಎಂಬುದನ್ನು ಶರಣರ ತತ್ವಗಳು ತಿಳಿಸಿವೆ. ದುರಾಸೆ, ಅಸೂಯೆ ನಮ್ಮ ಒಡಲಲ್ಲಿರುವುದರಿಂದಲೇ ಇಂದು ಸಮಾಜ ಕವಲು ದಾರಿಯಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯ್ಯಪ್ಪ ಮಾತನಾಡಿ, ಇಷ್ಟಲಿಂಗವನ್ನು ಪ್ರಜ್ಞಾ ಪೂರ್ವಕವಾಗಿ ಧರಿಸಿ, ಪೂಜಿಸಿದರೆ ನೆಮ್ಮದಿ, ಆನಂದ ಸಿಗುತ್ತದೆ. ಮನುಷ್ಯನ ಒತ್ತಡ ನಿಭಾಯಿಸುವ ಹಾಗೂ ಆರೋಗ್ಯ ವೃದ್ಧಿಸುವ ಶಕ್ತಿ ಇಷ್ಟಲಿಂಗಕ್ಕಿದೆ. ಅಷ್ಟೇ ಅಲ್ಲ ಒಬ್ಬ ಭವಿಯನ್ನು ಪ್ರಜ್ಞಾವಂತನನ್ನಾಗಿ ಮಾಡುವ ಶಕ್ತಿಯೂ ಇಷ್ಟಲಿಂಗಕ್ಕಿದೆ ಎಂದು ಉದಾಹರಣೆಗಳೊಂದಿಗೆ ಹೇಳಿದರು.  

ಸಮಾಜದ ಮುಖಂಡ ಬೆಳ್ಳೂಡಿ ರಾಮಚಂದ್ರಪ್ಪ ಮಾತನಾಡಿ, ಸಂಸ್ಕಾರವಂತ ಸಮಾಜ ನಿರ್ಮಾಣಕ್ಕೆ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದು ನಾಟಕ, ಮತ್ತೆ ಕಲ್ಯಾಣ ಕಾರ್ಯಕ್ರಮದಿಂದಾಗಿ ಸಾಣೇಹಳ್ಳಿ ಪ್ರಪಂಚದ ಗಮನ ಸೆಳೆದಿದೆ ಎಂದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, 22 ಕೆರೆಗಳಿಗೆ ಮತ್ತು ಭರಮಸಾಗರ ಕೆರೆಗೆ ನೀರು ಪೂರೈಸುವ ಏತ ನೀರಾವರಿ ಯೋಜನೆ ಜಗತ್ತಿನ ಗಮನ ಸೆಳೆದಿದ್ದು, ಅಂತಹ ಯೋಜನೆಗೆ ತಮ್ಮ ಜಮೀನುಗಳನ್ನು ನೀಡಿದ ರೈತರು ಸದಾ ಸ್ಮರಣೀಯರಾಗಿರುತ್ತಾರೆ. ಸಿರಿಗೆರೆ ಶ್ರೀಗಳ ರೈತಪರ ಕಳಕಳಿ ಮಾದರಿಯಾಗಿದೆ ಎಂದು ವೀರೇಶ್ ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಿರಿಗೆರೆಯ ನಿವೃತ್ತ ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ, ಹರಿಹರ ಸಿಪಿಐ ಸತೀಶ್, ಹರಿಹರ ಗ್ರಾಮಾಂತರ ಪಿಎಸ್‌ಐ ವೀರಬಸಪ್ಪ ಕುಸಲಾಪುರ ಮಾತನಾಡಿದರು.

ಗ್ರಾಮದ ವೈ.ಹೆಚ್. ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಯುವ ಉದ್ಯಮಿಗಳಾದ ಪಿ.ಹೆಚ್. ಪ್ರಶಾಂತ್, ಪಿ.ಹೆಚ್. ಪ್ರಕಾಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಾಂತೇಶ್, ಹರಗನಹಳ್ಳಿ ಮಂಜಣ್ಣ, ರಾಜು, ಹನಗವಾಡಿ ವಿಶ್ವನಾಥ್, ವಕೀಲ ಕೊಂಡಜ್ಜಿ ಶಿವಕುಮಾರ್ ಇನ್ನಿತರರು ಭಾಗವಹಿಸಿದ್ದರು.

ಹರಿಹರ ತಾಲ್ಲೂಕು ತರಳಬಾಳು ಯುವಕ ಸಂಘದ ಅಧ್ಯಕ್ಷ ಕೊಂಡಜ್ಜಿ ವೀರಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜದ ಮುಖಂಡ ಹಲಸಬಾಳು ಶಿವಾನಂದಪ್ಪ ಸ್ವಾಗತಿಸಿದರು. ವೈ.ಪಿ. ಸೌಮ್ಯ, ಬಿ.ಎಸ್. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಹೊಸಮನಿ ಶಂಭುಲಿಂಗ ವಂದಿಸಿದರು.

ಕರ್ನಾಟಕದ 227 ತಾಲ್ಲೂಕುಗಳಲ್ಲಿ ಈಗಾಗಲೇ ಗ್ರಾಮ ವಾಸ್ತವ್ಯ ಮಾಡಲಾಗಿದ್ದು, ಅಲ್ಲಿಯ ವಸ್ತುಸ್ಥಿತಿ ಅವಲೋಕಿಸಲಾಗಿದೆ. ಕಂದಾಯ ಇಲಾಖೆಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗುವಂತೆ, ಬೇರೆ ಬೇರೆ ಇಲಾಖೆಗಳನ್ನು ಮನೆ ಬಾಗಿಲಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ. ದಲಿತರ ಕೇರಿಯ ಜನರು ಬಹುತೇಕ ಜಮೀನು, ಸೂರು ಕೊಡುವಂತೆ ಮನವಿ ಮಾಡುತ್ತಿದ್ದು, ಆದಷ್ಟು ಬೇಗ ಪೂರೈಸುತ್ತೇನೆ. ಆಶ್ರಯ ವತಿಯಿಂದ ಜಮೀನು ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು. 

ಇಲ್ಲಿನ ಗ್ರಾಮಸ್ಥರು ಸ್ಮಶಾನಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ಇಡೀ ಊರು ಸುತ್ತಿ ಬಂದಿದ್ದೇವೆ. ಬೆಟ್ಟದ ಮೇಲೆ ಜಾಗ ಇದ್ದು, ಹೆಚ್ಚು ಕಲ್ಲು ಇರುವುದರಿಂದ ಶವಗಳನ್ನು ಸುಡಲು ಆಗುವುದಿಲ್ಲ. ಇಲ್ಲಿಯ ಗ್ರಾಮಸ್ಥರಿಗೆ ಜಮೀನು ಕೇಳಿದರೆ ನೀರಾವರಿ ಜಾಗ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮ ಊರಿಗೆ ಸ್ಮಶಾನ ಬೇಕೆಂದರೆ ನೀವೇ ಜಾಗ ಕೊಡಬೇಕು. ಈ ಹಿಂದೆ ಇಲ್ಲಿರುವ ಸರ್ಕಾರಿ ಶಾಲೆಗೆ ಯಾರೋ ಜಮೀನನ್ನು ದಾನವಾಗಿ ನೀಡಿದ್ದರಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಜಮೀನು ಸಿದ್ಧ ಮಾಡಿಕೊಂಡು ತಿಳಿಸಿದರೆ ಸ್ಮಶಾನಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಈಗಾಗಲೇ ಇಲ್ಲಿನ ಸರ್ಕಾರಿ ಶಾಲೆಗೆ ಅನುದಾನ ಒದಗಿಸುವುದಾಗಿ ತಿಳಿಸಿದ್ದು, ಹೊಸ ಕಟ್ಟಡ ನಿರ್ಮಿಸಿ ಹಾಗೂ ತಾಲ್ಲೂಕು ಕಚೇರಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ರೇಣುಕಾಚಾರ್ಯ ಅವರು ಗ್ರಾಮಗಳ ಅಭಿವೃದ್ಧಿಗಾಗಿ 20 ಕೋಟಿ ರೂ. ಅನುದಾನ ತಂದಿದ್ದು. ಗ್ರಾಮದ ಬೆಳವಣಿಗೆಗೆ ಪೂರಕವಾಗುವ ಕೆಲಸ ಮಾಡಿದ್ದಾರೆ ಎಂದು ಶ್ಲ್ಯಾಘಿಸಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕೋವಿಡ್ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ ಗ್ರಾಮ ವಾಸ್ತವ್ಯ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಪುನರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸಾವಿರಾರು ಅರ್ಜಿಗಳು ವಿಲೇವಾರಿಯಾಗಿವೆ. ಜಿಲ್ಲಾಡಳಿತ, ತಾಲ್ಲೂಕಾಡಳಿತ ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳು ಹಗಲು ರಾತ್ರಿ ಶ್ರಮಿಸಿ ಗ್ರಾಮ ವಾಸ್ತವ್ಯವನ್ನು ರಾಜ್ಯಕ್ಕೆ ಮಾದರಿ ಮತ್ತು ದಿಕ್ಸೂಚಿ ಕಾರ್ಯಕ್ರಮವನ್ನಾಗಿ ಮಾಡಿಕೊಟ್ಟಿದ್ದಾರೆ. ಇಲ್ಲಿಯ ಗ್ರಾಮಸ್ಥರ ಒಗ್ಗೂಡುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಬಸವನಗೌಡ ಕೋಟೂರ, ತಾ.ಪಂ ಉಪಕಾರ್ಯನಿರ್ವಹಣಾಧಿಕಾರಿ ರಾಮಭೋವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗಣ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.