ಒಣ ಕಸ ವಿಲೇವಾರಿಯಿಂದ ರಸಗೊಬ್ಬರ ತಯಾರಿಕಾ ಘಟಕ ಸ್ಥಾಪನೆ

ಒಣ ಕಸ ವಿಲೇವಾರಿಯಿಂದ  ರಸಗೊಬ್ಬರ ತಯಾರಿಕಾ ಘಟಕ ಸ್ಥಾಪನೆ

ದಾವಣಗೆರೆ, ಅ.15- ಒಣ ಕಸ ವಿವೇವಾರಿಯಲ್ಲಿ ರಾಜ್ಯದಲ್ಲಿಯೇ ದಾವಣಗೆರೆ ನಗರ ಪಾಲಿಕೆ  38ನೇ ವಾರ್ಡಿನ ಎಂ.ಸಿ.ಸಿ. `ಬಿ’ ಬ್ಲಾಕ್ ಮಾದರಿ ಬಡಾವಣೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಬಡಾವಣೆಯಲ್ಲಿ ಘನ ತ್ಯಾಜ್ಯ ವಿಲೇವಾರಿಯಿಂದ ರಸಗೊಬ್ಬರ ತಯಾರಿಸುವ ಘಟಕವನ್ನು ಸ್ಥಾಪಿಸಿದ್ದಾರೆ.  ರಾಜ್ಯ ಸರ್ಕಾರ ದಾವಣಗೆರೆ ಮಹಾನಗರ ಪಾಲಿಕೆಗೆ ರಾಜ್ಯ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿ ನೀಡಿ ಗೌರವಿಸಿದೆ. ಬಡಾವಣೆಯ ಪಾಲಿಕೆಯ ಸದಸ್ಯ ಗಡಿಗುಡಾಳ್ ಮಂಜುನಾಥ್ ಮತ್ತು ಆರೋಗ್ಯ ನಿರೀಕ್ಷಕ ಮಾಲತೇಶ್ ಅವದರ ಪ್ರಯತ್ನದಿಂದ ಇಲ್ಲಿನ ಬೀದಿಗಳಲ್ಲಿನ ಒಣ ಕಸವನ್ನು ತೆಗೆದು ಅದರಿಂದ ಉತ್ತಮವಾದ ರಸಗೊಬ್ಬರ ತಯಾರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 

ಈ ಸಾಧನೆಗೆ ಕಾರಣರಾದ ಪಾಲಿಕೆ ಸದಸ್ಯ ಮಂಜುನಾಥ್ ಹಾಗೂ ಮಾಲತೇಶ್ ಅವರನ್ನು ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಹಾಗೂ ಬಡಾವಣೆಯ ಮುಖಂಡರುಗಳು ಸೇರಿ ಸನ್ಮಾನಿಸಿ, ಗೌರವಿಸಿದರು.