ಕಣ್ಮನ ಸೆಳೆದ `ದಾಂಡಿಯಾ ರಾಸ್’

ಕಣ್ಮನ ಸೆಳೆದ `ದಾಂಡಿಯಾ ರಾಸ್’

ದಾವಣಗೆರೆ, ಅ.11- ಲೇಡಿಸ್ ಕ್ಲಬ್ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಸಂಜೆ ಆಯೋಜಿಸಿದ್ದ `ದಾಂಡಿಯಾ ರಾಸ್’ನೃತ್ಯ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಭಿನ್ನ ವಿಭಿನ್ನವಾದ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಡುಗೆಗನ್ನು ಧರಿಸಿ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

ಶ್ರೀಮತಿ ಸುಮ ಎಂ.ಪಿ. ರೇಣುಕಾಚಾರ್ಯ, ನಗರ ಪಾಲಿಕೆ ಮಾಜಿ ಮಹಾಪೌರರೂ ಆದ ಹಾಲಿ ಸದಸ್ಯ ಬಿ.ಜಿ. ಅಜಯ್ ಕುಮಾರ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಹಾಗೂ ಇತರೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಲೇಡಿಸ್ ಕ್ಲಬ್ ಸಂಸ್ಥಾಪಕರಾದ ಶ್ರೀಮತಿ ಅಮೀರಾ ಬಾನು, ಅಧ್ಯಕ್ಷರಾದ ವಿನೋದ ರಾಮದಾಸ್, ಉಪಾಧ್ಯ ಕ್ಷರಾದ ನಾಗರತ್ನ, ಚೇತನ ಶಿವಕುಮಾರ್, ಸಂಧ್ಯಾ ಕುರುಡೇಕರ್, ಕಾರ್ಯದರ್ಶಿ ಪದ್ಮಪ್ರಿಯಾ ಮತ್ತು ಇತರೆ ಪದಾಧಿಕಾರಿಗಳು, ಸದಸ್ಯರು, ವಿಶೇಷ ಆಹ್ವಾನಿ ತರು ನೃತ್ಯದಲ್ಲಿ ಭಾಗಿಯಾಗಿ ಸಂಭ್ರಮ ಹಂಚಿಕೊಂಡರು.