ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿದ ಶಾಸಕ ರವೀಂದ್ರನಾಥ

ಸಾಯಿಬಾಬಾ ಮಂದಿರದಲ್ಲಿ  ಪೂಜೆ ಸಲ್ಲಿಸಿದ ಶಾಸಕ ರವೀಂದ್ರನಾಥ

ದಾವಣಗೆರೆ, ಅ.8 – ನಗರದ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ಮಂದಿರಕ್ಕೆ ನವರಾತ್ರಿ ಮೊದಲ ದಿನದಂದು ಭೇಟಿ ನೀಡಿದ್ದ ಹಿರಿಯ ಶಾಸಕ  ಎಸ್.ಎ ರವೀಂದ್ರನಾಥ್ ಅವರು ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಜನರಿಗೆ ಆರೋಗ್ಯ, ಸುಖ, ಸಮೃದ್ಧಿಗಳನ್ನು ಕರುಣಿಸುವಂತೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಧನಂಜಯ್ ಕಡ್ಲೇಬಾಳು, ಪದ್ಮನಾಭ ಶೆಟ್ಟಿ, ಕಿರಣ್ ಸ್ವಾಮಿ, ಗಂಗಾಧರ್ ಬಾಬಾರ ಆಶೀರ್ವಾದ ಪಡೆದರು.