ಶ್ರೀ ಸಾಯಿಬಾಬಾರ 103ನೇ ಪುಣ್ಯಾರಾಧನೆ

ಶ್ರೀ ಸಾಯಿಬಾಬಾರ 103ನೇ ಪುಣ್ಯಾರಾಧನೆ

ಶ್ರೀ ಸದ್ಗುರು ಶ್ರೀ ಸಾಯಿಬಾಬಾರವರ 103ನೇ ಪುಣ್ಯಾರಾಧನೆ ಮಹೋತ್ಸವವು ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬುಧವಾರ ಆರಂಭಗೊಂಡಿದ್ದು, ಇದೇ ದಿನಾಂಕ 15ರವರೆಗೆ ನಡೆಯಲಿದೆ. ಜಡೇಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ದೀಪ ಬೆಳಗಿಸುವುದರ ಮೂಲಕ ಪುಣ್ಯಾರಾಧನಾ ಮಹೋತ್ಸವಕ್ಕೆ ಬುಧವಾರ ಸಂಜೆ ಚಾಲನೆ ನೀಡಿದರು. ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ಸೇರಿದಂತೆ, ಅನೇಕ ಗಣ್ಯರು ಉಪಸ್ಥಿತರಿದ್ದರು.