ಮಳೆಯಲ್ಲೂ ಆರದ ವೈದ್ಯ ವಿದ್ಯಾರ್ಥಿಗಳ ಹೋರಾಟದ ಕಾವು

ದಾವಣಗೆರೆ, ಅ.6- ಜೆಜೆಎಂ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿ ಗಳು ನಡೆಸುತ್ತಿರುವ ಹೋರಾಟ 6ನೇ ದಿನವಾದ ಇಂದೂ ಸಹ ಮುಂದುವರೆದಿತ್ತು. ಜಡಿ ಮಳೆ ಸುರಿದರೂ ಹೋರಾಟದಿಂದ ಹಿಂದೆ ಸರಿಯದೇ ಮಳೆಯಲ್ಲಿ ನೆನೆಯುತ್ತಾ, ಚಳಿಯಲ್ಲಿ ನಡುಗುತ್ತಾ ಶಿಷ್ಯ ವೇತನಕ್ಕಾಗಿ ಬಿಗಿಪಟ್ಟು ಹಿಡಿದಿದ್ದರು.

ನಗರದ ಶ್ರೀ ಜಯದೇವ ಮುರುಘ ರಾಜೇಂದ್ರ ವೃತ್ತದಲ್ಲಿ ಟೆಂಟ್ ಹಾಕಿಕೊಂಡು ವಿಭಿನ್ನವಾಗಿ ಹೋರಾಟದ ಮುಖೇನ ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿಯ ಗಮನ ಸೆಳೆಯು ತ್ತಿರುವ ಪ್ರತಿಭಟನಾ ನಿರತ ವೈದ್ಯ ವಿದ್ಯಾ ರ್ಥಿಗಳು ಮಳೆಯನ್ನೂ ಲೆಕ್ಕಿಸದೇ ಕೊಡೆಗಳನ್ನು ಹಿಡಿದು, ಜರ್ಕಿನ್‌ಗಳನ್ನು ಹಾಕಿಕೊಂಡು ಅವುಗಳ ಆಶ್ರಯದಲ್ಲಿ ಹೋರಾಟ ನಡೆಸಿದರು. ಅಲ್ಲದೇ ತಮಗೆ ನ್ಯಾಯವಾಗಿ ಬರಬೇಕಾದ ಶಿಷ್ಯ ವೇತನ ಕೊಡದ ಹೊರತು, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.

ಕಳೆದ 5 ತಿಂಗಳಿನಿಂದ ತಮಗೆ ಬರಬೇ ಕಾದ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಕಳೆದ ಐದಾರು ದಿನಗಳಿಂ ದಲೂ ನಾವು ಅನಿರ್ದಿಷ್ಟಾವಧಿ ಹೋರಾಟ ನಡೆಸಿದ್ದೇವೆ. ಇನ್ನೂ ಸಹ ಸರ್ಕಾರವಾಗಲೀ, ಕಾಲೇಜು ಆಡಳಿತ ಮಂಡಳಿಯಾಗಲೀ ನಮ್ಮ ಬೇಡಿಕೆಗಳನ್ನು ಈಡೇರಿಸುವತ್ತ ಗಮನ ಹರಿ ಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ, ಕಾಲೇಜು ಆಡಳಿತ ಮಂಡಳಿಗಳ ಮಧ್ಯೆ ಹಗ್ಗ ಜಗ್ಗಾಟದಲ್ಲಿ ನಮಗೆ ಬರಬೇಕಾದ ಶಿಷ್ಯ ವೇತನ ನೀಡಲು ಮೀನಾಮೇಷ ಎಣಿಸಲಾಗುತ್ತಿದೆ. ಕೋವಿಡ್ ವಿರುದ್ಧ ಕೆಲಸ ಮಾಡುವ ವೈದ್ಯರಿಗೆ ಸಕಾಲಕ್ಕೆ ವೇತನ ಪಾವತಿಸಲು ಎಲ್ಲಾ ರಾಜ್ಯಗಳಿಗೂ ಸುಪ್ರೀಂ ಕೋರ್ಟ್‍ನ ಸ್ಪಷ್ಟ ನಿರ್ದೇಶನವಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನೇ ಧಿಕ್ಕರಿಸಿ, ಕಾಲೇಜು ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರ ನಮಗೆ ನೀಡಬೇಕಾದ ಶಿಷ್ಯ ವೇತನವನ್ನು ಪಾವತಿಸದೇ, ಸತಾಯಿ ಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.