ವಿಶ್ವಕರ್ಮ ಸಮಾಜದ ಒಳ ಪಂಗಡಗಳು ಒಂದಾಗಬೇಕು

ವಿಶ್ವಕರ್ಮ ಸಮಾಜದ  ಒಳ ಪಂಗಡಗಳು ಒಂದಾಗಬೇಕು

ರಾಣೇಬೆನ್ನೂರಿನಲ್ಲಿನ ತಹಶೀಲ್ದಾರ್‌ ಜಿ. ಶಂಕರ್‌ ಆಶಯ

ರಾಣೇಬೆನ್ನೂರು, ಅ.4- ಸಮಾಜದ ಎಲ್ಲ ಒಳ ಪಂಗಡಗಳು ಭಿನ್ನತೆಗಳನ್ನು ಮರೆತು ಒಂದಾಗಬೇಕು. ಸಮಾಜದ ಇತಿಹಾಸದ ಭವ್ಯತೆಗಳನ್ನು ಅರಿತುಕೊಳ್ಳ ಬೇಕು ಎಂದು ತಹಶೀಲ್ದಾರ್‌ ಜಿ. ಶಂಕರ್ ಹೇಳಿದರು. 

ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವವನ್ನು ಸಾಂಕೇತಿಕವಾಗಿ ಆಚರಿಸಿ ಅವರು ಮಾತನಾಡಿದರು.

ವಿಶ್ವಮಟ್ಟದಲ್ಲಿ ಏನೇ ಕಾರ್ಯಗಳು ನಡೆದರೂ ಅದು ವಿಶ್ವಕರ್ಮನಿಂದಲೇ ಮಾತ್ರ. ದೇವತೆಗಳನ್ನು ನಿರ್ಮಾಣ ಮಾಡಿದವ ವಿಶ್ವಕರ್ಮ, ಇಡೀ ಸೃಷ್ಠಿಯ ಎಲ್ಲ ವಸ್ತುಗಳು ವಿಶ್ವಕರ್ಮನಿಂದಲೇ ನಿರ್ಮಿತವಾಗಿವೆ ಎಂದರು.

ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ವಿಶ್ವಕರ್ಮರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಎಂದರೆ ಜಗತ್ತಿನ ಕರ್ತೃ, ವಿಶ್ವಕರ್ಮ ಎಂಬುದು ಸಂಸ್ಕೃತಿಯ ಪ್ರತೀಕ. ವಿಶ್ವಕರ್ಮರು ತಯಾ ರಿಸಿದ ವಸ್ತುಗಳನ್ನು ಪ್ರತಿ ಮನೆ ಮನೆಗಳಲ್ಲಿ ಕಾಣ ಬಹುದು ಎಂದರು. 

ಬಸವರಾಜ ಬಡಿಗೇರ ಮಾತನಾಡಿ, ವಿಶ್ವಕರ್ಮ ಜನಾಂಗಕ್ಕೆ ಸರ್ಕಾರದ ಹೆಚ್ಚಿನ ಸೌಲಭ್ಯಗಳು ದೊರೆ ಯುವಂತಾಗಬೇಕು. ತಾಲ್ಲೂಕಿ ನಲ್ಲಿ ಮಾತ್ರ ವಿಶ್ವಕರ್ಮ ಜಯಂತ್ಯೋತ್ಸವ ನಡೆಯುವುದಲ್ಲ. ಪ್ರತಿ ಗ್ರಾಮ ಪಂ ಚಾಯ್ತಿಯಲ್ಲಿ ಹಾಗೂ ಮಂಡಲದಲ್ಲಿ ಆಚರಿಸು ವಂತಾಗಬೇಕು. ಭಗವಾನ್ ವಿಶ್ವಕರ್ಮನ ಪೂಜೆ ಮತ್ತು ಆರಾಧನೆ ಮಾಡುವುದರಿಂದ ಗೃಹದೋಷಗಳು ಉಂಟಾಗುವುದಿಲ್ಲ ಎಂದು ಬಡಿಗೇರ ಹೇಳಿದರು.  

ಓಂಕಾರಪ್ಪ ಅರ್ಕಾಚಾರಿ,  ರಾಘವೇಂದ್ರಕುಮಾರ, ನಾಗರಾಜ್ ಬಡಿಗೇರ, ವೀರಣ್ಣ ಅರ್ಕಾಚಾರಿ, ಶ್ರೀಧರ ಬೆಳ್ಳೂಡಿ, ಪ್ರಶಾಂತ ಬೆಳ್ಳೂಡಿ, ಚಂದ್ರು ಹುಲ್ಲತ್ತಿ, ಸಿದ್ದಣ್ಣ ಬಡಿಗೇರ, ಪರಮೇಶ್ವರಚಾರ್ ಬಡಿಗೇರ, ಹೇಮಚಾರ್ ಬಡಿಗೇರ, ಶಿವಾಚಾರ್ ಇಟಗಿ, ದೇವೇಂದ್ರಪ್ಪ ಹರನಗಿರಿ, ಹನುಮಂತಪ್ಪ ಕುದರಿಹಾಳ, ಗಣೇಶ ಬಡಿಗೇರ, ಮೇಡ್ಲೇರಿ ಈರಣ್ಣ ಬಡಿಗೇರ, ಮೌನಲಿಂಗ ಮಾಯಾಚಾರಿ ಇದ್ದರು.