ನರಸಗೊಂಡನಹಳ್ಳಿಯಲ್ಲಿ ಶ್ರವಣ ದೋಷ ತಪಾಸಣೆ

ನರಸಗೊಂಡನಹಳ್ಳಿಯಲ್ಲಿ ಶ್ರವಣ ದೋಷ ತಪಾಸಣೆ

ದಾವಣಗೆರೆ, ಅ.4- ಲಯನ್ಸ್‌ ಕ್ಲಬ್‌ ದಾವಣಗೆರೆ ಹಾಗೂ ಲಯನ್ಸ್‌ ಕ್ವೆಸ್ಟ್‌ ವಾಕ್ ಮತ್ತು ಶ್ರವಣ ಕೇಂದ್ರಗಳ ಆಶ್ರಯದಲ್ಲಿ ಹರಿಹರ ತಾಲ್ಲೂಕು ನರಸಗೊಂಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಶ್ರವಣ ದೋಷ ತಪಾಸಣೆ ಶಿಬಿರವನ್ನು ನಡೆಸಲಾಯಿತು.

ಗ್ರಾಮದ ಪ್ರಮುಖರಾದ ಮಹೇಶ್ವರಪ್ಪ ಶಿಬಿರವನ್ನು ಉದ್ಘಾಟಿಸಿದರು. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದು, ಕೀಲು ಕುದುರೆ ಕಲಾವಿದ ಈಶ್ವರಪ್ಪ ಶಿಬಿರದ ಉಸ್ತುವಾರಿ ವಹಿಸಿದ್ದರು. ಶ್ರವಣ ದೋಷ ತಜ್ಞ ಡಾ. ಟಿ.ವಿ. ಸುಬ್ಬರಾಜು ತಪಾಸಣೆ ನಡೆಸಿದರು.