ಕೆಳ ಸೇತುವೆ ಆಟೋಮ್ಯಾಟಿಕ್ ಮೋಟಾರ್ ಅಳವಡಿಕೆ ಪರಿಶೀಲನೆ

ಕೆಳ ಸೇತುವೆ ಆಟೋಮ್ಯಾಟಿಕ್ ಮೋಟಾರ್ ಅಳವಡಿಕೆ ಪರಿಶೀಲನೆ

ಶಾಶ್ವತ ಪರಿಹಾರದ ಯೋಜನೆ ಶೀಘ್ರವೇ ಪೂರ್ಣಗೊಳಿಸಲು ಮೇಯರ್ ಸೂಚನೆ

ದಾವಣಗೆರೆ, ಅ.4- ನಗರ ಪಾಲಿಕೆಯ ಎದುರಿನ ಕೆಳ ಸೇತುವೆ ಯಲ್ಲಿ ಜನ ಸಂಚಾರಕ್ಕೆ ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ಕೆಳ ಸೇತುವೆಯನ್ನು ಹೈಟೆಕ್ ಆಗಿ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದ ಮೇಯರ್ ಎಸ್.ಟಿ. ವೀರೇಶ್ ಅವರು ಕಾಮಗಾರಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಟೋಮ್ಯಾಟಿಕ್ ಮೋಟಾರ್ ಅಳವಡಿ ಸುವುದು ಹಾಗೂ ಸುಸಜ್ಜಿತವಾದ ಪೇಂಟಿಂಗ್ ವ್ಯವಸ್ಥೆ ಮಾಡುವ ಕುರಿತಂತೆ ಪರಿಶೀಲನೆ ನಡೆಸಿದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದೇ ಈ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಪೂರ್ಣ ಗೊಳಿಸುವಂತೆ ಮೇಯರ್ ವೀರೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಳೆ ಬಂದಾಗ ಜನರು ಅನುಭವಿಸುವ ಸಮಸ್ಯೆ ಅಷ್ಟಿಷ್ಟಲ್ಲ. ಕೆಳ ಸೇತುವೆಯಲ್ಲಿ ನೀರು ನಿಲ್ಲುವುದ ರಿಂದ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತದೆ. ಕಾಮ ಗಾರಿ ಕಳಪೆ ಆಗಬಾರದು. ಗುಣಮ ಟ್ಟದಿಂದ ಕೂಡಿರುವ ಜೊತೆಗೆ ವೇಗವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಇತರರು ಇದ್ದರು.