ಹರಿಹರ ತಾಲ್ಲೂಕಿನಲ್ಲಿ 8 ಸಾವಿರ ಜನರಿಗೆ ಲಸಿಕೆ

ಹರಿಹರ ತಾಲ್ಲೂಕಿನಲ್ಲಿ 8 ಸಾವಿರ ಜನರಿಗೆ ಲಸಿಕೆ

ಹರಿಹರ, ಸೆ.19- ತಾಲ್ಲೂಕಿನಲ್ಲಿ ಸುಮಾರು 17 ಸಾವಿರ ಜನರಿಗೆ ಲಸಿಕೆ ಹಾಕುವ  ಗುರಿ ಹೊಂದಿದ್ದು, ಇದರಲ್ಲಿ ನಿನ್ನೆ 8 ಸಾವಿರ ಮಂದಿಗೆ ಲಸಿಕೆಯನ್ನು ಹಾಕಲಾಗಿದೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ತಾಲ್ಲೂಕಿನ 24 ಗ್ರಾಮ ಪಂಚಾಯ್ತಿ ಮತ್ತು ನಗರಸಭೆಯ 31 ವಾರ್ಡ್‌ಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಎಇಇ ಬಿರಾದಾರ, ಆರೋಗ್ಯ ಇಲಾಖೆ ಅಧಿಕಾರಿ ಡಾ. ಚಂದ್ರಮೋಹನ್, ನಗರಸಭೆ ಅಧ್ಯಕ್ಷೆ ರತ್ನ ಡಿ. ಉಜ್ಜೇಶ್, ಸದಸ್ಯರಾದ ಅಶ್ವಿನಿ ಕೃಷ್ಣ, ಉಷಾ ಮಂಜುನಾಥ್, ಕವಿತಾ ಮಾರುತಿ ಬೇಡರ, ಆರ್.ಸಿ. ಜಾವೇದ್, ದಾದಾ ಖಲಂದರ್, ಶಂಕರ್ ಖಟಾವ್ಕರ್, ಎಸ್.ಎಂ. ವಸಂತ, ಎಂ.ಎಸ್. ಬಾಬುಲಾಲ್, ಹನುಮಂತಪ್ಪ, ದಿನೇಶ್ ಬಾಬು, ಕೆ.ಜಿ. ಸಿದ್ದೇಶ್, ನಿಂಬಕ್ಕ ಚಂದಾಪೂರ್ ಇನ್ನಿತರರಿದ್ದರು.