ಮಲೇಬೆನ್ನೂರಿನ ವೀರಭದ್ರೇಶ್ವರ ದೇಗುಲಕ್ಕೆ ಯಡಿಯೂರಪ್ಪ ಭೇಟಿ

ಮಲೇಬೆನ್ನೂರಿನ ವೀರಭದ್ರೇಶ್ವರ ದೇಗುಲಕ್ಕೆ ಯಡಿಯೂರಪ್ಪ ಭೇಟಿ

ಮಲೇಬೆನ್ನೂರು, ಸೆ.19- ಪಟ್ಟಣದ ಹೊರವಲಯದಲ್ಲಿರುವ ಶ್ರೀ ಸಿದ್ಧಿ ವಿನಾಯಕ, ಶ್ರೀ ಭದ್ರಕಾಳಿ, ಶ್ರೀ ಕಾಲಭೈರವ, ಶ್ರೀ ನಾಗ ಪರಿವಾರದೊಂದಿಗೆ ಸ್ಥಾಪಿಸಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಡಿಯೂರಪ್ಪ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನದ ಬಗ್ಗೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರು ಯಡಿಯೂರಪ್ಪನವರಿಗೆ ಮಾಹಿತಿ ನೀಡಿದರು. ಶಾಸಕ ಎಂ.ಪಿ. ರೇಣುಕಾಚಾರ್ಯ, ಪ್ರೊ. ಎ. ಲಿಂಗಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಬಿ. ಚಿದಾನಂದಪ್ಪ, ಬಿ. ನಾಗೇಂದ್ರಪ್ಪ, ಎನ್.ಕೆ. ವೃಷಭೇಂದ್ರಪ್ಪ, ಬಿ. ಮಹಾರುದ್ರಪ್ಪ, ಬಿ. ಮಲ್ಲಿಕಾರ್ಜುನ್, ಬಿ. ಉಮಾಶಂಕರ್, ಬಿ. ನಾಗೇಶ್, ಬಿ.ವಿ. ರುದ್ರೇಶ್, ಬಿ.ಎಂ. ಹರ್ಷ, ಎಸ್‌.ಎನ್‌. ಶಂಭುಲಿಂಗಪ್ಪ, ಉಪನ್ಯಾಸಕ ಹೊನ್ನಾಳಿ ಗಂಗಾಧರ್‌, ತಾ.ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಪ್ರ.ಕಾರ್ಯದರ್ಶಿಗಳಾದ ಆದಾಪುರ ವೀರೇಶ್, ಹುಗ್ಗಿ ಮಹಾಂತೇಶ್, ಜೆಡಿಎಸ್ ಮುಖಂಡ ಸಿರಿಗೆರೆ ಪರಮೇಶ್ವರಗೌಡ, ಎಂ.ಆರ್. ಮಹಾದೇವಪ್ಪ, ಹೆಚ್.ಎಸ್. ವೀರಭದ್ರಯ್ಯ, ಹೊಸಳ್ಳಿ ಕರಿಬಸಪ್ಪ, ಬಟ್ಟೆ ಅಂಗಡಿ ವಿಶ್ವ ಸೇರಿದಂತೆ ಅನೇಕರು ಹಾಜರಿದ್ದರು.