ಜಿಗಳಿಯಲ್ಲಿ 892 ಜನರಿಗೆ ಕೋವಿಡ್ ಲಸಿಕೆ

ಜಿಗಳಿಯಲ್ಲಿ 892 ಜನರಿಗೆ ಕೋವಿಡ್ ಲಸಿಕೆ

ಮಲೇಬೆನ್ನೂರು, ಸೆ.19- ಜಿಗಳಿ ಗ್ರಾ.ಪಂ. ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ 892 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಜಿಗಳಿಯ ಎ.ಕೆ.ಕಾಲೋನಿ ಹಾಗೂ ಗ್ರಾ.ಪಂ ಕಚೇರಿ ಆವರಣದಲ್ಲಿ 540 ಜನರು ಮತ್ತು ಜಿ.ಬೇವಿನಹಳ್ಳಿ ಯಲ್ಲಿ 352 ಜನರು ಲಸಿಕೆ ಹಾಕಿಸಿಕೊಂ ಡರು ಎಂದು ಪಿಡಿಓ ಉಮೇಶ್ ತಿಳಿಸಿ ದ್ದಾರೆ. ಗ್ರಾ.ಪಂ ಅಧ್ಯಕ್ಷರಾದ ಆಶಾ ಅಣ್ಣಪ್ಪ, ಉಪಾಧ್ಯಕ್ಷ ಎಂ.ಎಸ್.ಮಲ್ಲನ ಗೌಡ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದ್ದರು.