ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್ ಉಪಾಧ್ಯಕ್ಷರಾಗಿ ಹರಳಹಳ್ಳಿ ಚಂದ್ರಪ್ಪ

ಹೊನ್ನಾಳಿ ಪಿಕಾರ್ಡ್‌ ಬ್ಯಾಂಕ್ ಉಪಾಧ್ಯಕ್ಷರಾಗಿ ಹರಳಹಳ್ಳಿ ಚಂದ್ರಪ್ಪ

ಹೊನ್ನಾಳಿ, ಸೆ.15- ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್  ಉಪಾಧ್ಯಕ್ಷರಾಗಿ ಹರಳಹಳ್ಳಿಯ  ಎ.ಹೆಚ್.ಚಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಘೋಷಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶಾಂತನಗೌಡ, ಪಿಕಾರ್ಡ್‌ ಬ್ಯಾಂಕ್‍ನ ಅಧ್ಯಕ್ಷ ಎ.ನಾಗೇಂದ್ರಪ್ಪ, ನಿರ್ದೇಶಕರಾದ ಎಂ.ಆರ್.ಹನುಮಂತಪ್ಪ, ಸೋಮ್ಲಾನಾಯ್ಕ, ಜಿ.ಶಂಕ ರಪ್ಪ, ಹೆಚ್.ಪಿ.ವಿಜಯಕುಮಾರ್, ಎಂ. ಬಸವರಾಜಪ್ಪ, ಕೆ.ತಿಮ್ಮೇಶಪ್ಪ, ಟಿ.ಜೆ.ರಮೇಶ್‍ಗೌಡ, ಮಮತಾ ರಮೇಶ್, ಸರೋಜಪ್ಪ ಸಿದ್ದಪ್ಪ, ಮಾಣಿಕ್ಯ ನಾಯ್ಕ, ಕೆ.ಉಮಾಪತಿ,  ಮುಖಂಡ ಅರಬಗಟ್ಟೆ ರಮೇಶ್ ಬ್ಯಾಂಕಿನ ವ್ಯವಸ್ಥಾಪಕರಾದ ಸಿ.ಎನ್.ವಿಶಾಲಕ್ಷಿ ಸೇರಿದಂತೆ ಇನ್ನಿತರರಿದ್ದರು.