ಹರಪನಹಳ್ಳಿಯಲ್ಲಿ ಮನೆ ಕಳ್ಳತನ

ಹರಪನಹಳ್ಳಿ, ಆ.30- ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ಭಾನುವಾರ ಸಂಜೆ ಮನೆಯ ಬಾಗಿಲು ಮುರಿದು ಅಪಾರ ಪ್ರಮಾ ಣದ ಚಿನ್ನಾಭರಣ ದೋಚಿ ಕೊಂಡು ಪರಾರಿಯಾದ ಘಟನೆ ಜರುಗಿದೆ.

ಕೊಟ್ಟೂರು ರಸ್ತೆಯ ಡಾ. ಹರ್ಷ ಆಸ್ಪತ್ರೆ ಬಳಿ ಇರುವ ಶಿವಪ್ರಸಾದ್ ಹಾಗೂ ಡಾ. ಅಂಬಿಕಾ ದಂಪತಿಯ ಮನೆಯಲ್ಲಿ ಕಳ್ಳತನವಾಗಿದೆ. ಮನೆಯವರು ಬೀಗ ಹಾಕಿಕೊಂಡು ದಾವಣ ಗೆರೆಗೆ ಹೋಗಿದ್ದರು. ಈ ಸಂದ ರ್ಭದಲ್ಲಿ ಕಳ್ಳರು ಮನೆಯ ಕದ ಮುರಿದು ಒಳ ನುಗ್ಗಿ,  ಅಂದಾಜು 15 ಲಕ್ಷ  ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು  ದೋಚಿಕೊಂಡು ಹೋಗಿದ್ದಾರೆ. 

ವೃತ್ತ ನಿರೀಕ್ಷಕ ನಾಗರಾಜ ಕಮ್ಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಿವಪ್ರಸಾದ್  ನೀಡಿದ ದೂರನ್ನು ಪಿಎಸ್‌ಐ ಸಿ. ಪ್ರಕಾಶ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.