ಜಿಲ್ಲೆಯಲ್ಲಿ 12 ಪಾಸಿಟಿವ್ 14 ಗುಣಮುಖ

ದಾವಣಗೆರೆ, ಆ.26- ಜಿಲ್ಲೆಯಲ್ಲಿ ಗುರುವಾರ 12 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 14 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿಯೇ 12 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 230 ಸಕ್ರಿಯ ಪ್ರಕರಣಗಳಿವೆ. 

ಕಳೆದೊಂದು ವಾರದ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಪಾಸಿಟಿವಿ ದರ ಶೇ.0.60ರಷ್ಟಿದೆ. ಮರಣ ಪ್ರಮಾಣ ಶೇ.1.12ರಷ್ಟಿದೆ.