ಗೋಡೆ ಬರಹ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ

ಗೋಡೆ ಬರಹ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ

ಹರಿಹರ, ಆ. 24 – ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ನವೀಕೃತ ಗೋಡೆ ಬರಹವನ್ನು ಮಾಡಿದ ಚಿತ್ರಕಲಾ ಶಿಕ್ಷಕರಾದ ಸಿ. ನಾಗರಾಜ ಚಿರಡೋಣಿ, ಆಂಜನೇಯ ನಾಯ್ಕ, ಕರೆಕಟ್ಟೆ ಚನ್ನಗಿರಿ, ಅನಿಲ್‌ಕುಮಾರ್ ಅರಸಾಪುರ, ಎ.ಎಸ್. ಮುರುಘರಾಜೇಂದ್ರ ಅವರುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ. ಸಿದ್ದಪ್ಪ ಸನ್ಮಾನಿಸಿದರು.