ಮೌಲ್ಯರಹಿತರು ಸಂಸತ್ತು ಪ್ರವೇಶಿಸಬಾರದು

ಮೌಲ್ಯರಹಿತರು ಸಂಸತ್ತು ಪ್ರವೇಶಿಸಬಾರದು

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅಸಮಾಧಾನ

ರಾಣೇಬೆನ್ನೂರು, ಆ.19- ಲೋಕಸಭೆ, ವಿಧಾನಸಭೆಗಳು ಸಂವಿಧಾನದ ಗುಡಿಗಳು. ಸಭಾಧ್ಯ ಕ್ಷರ ಎದುರಿನ ಟೇಬಲ್ ಮೇಲೆ ಹತ್ತಿ ನಿಲ್ಲುವುದು, ಪುಸ್ತಕಗಳನ್ನು ಎಸೆಯುವುದು ಅಸಂಬದ್ಧ  ವರ್ತನೆಯಾಗಿದೆ.  ಅಧ್ಯಕ್ಷರು ಬಂದಾಗ ಸಭಾ ನಾಯಕರು, ವಿರೋಧಿ ನಾಯಕರು ಎದ್ದು ನಿಂತು ಗೌರವಿಸುವುದು  ನಮ್ಮ ಸಂಪ್ರದಾಯ. ಅದನ್ನು ಮುರಿಯುವ ಮೌಲ್ಯರಹಿತರು  ಇಲ್ಲಿಗೆ ಬರಲೇಬಾರದು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಕೋಪೋದ್ರಿಕ್ತರಾಗಿ ಅಸಮಾಧಾನ ವ್ಯಕ್ತಪಡಿಸಿದರು. 

ಇಂದಿಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 8 ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರಂತೆ ಸಂಸದರು ಆಯ್ಕೆಯಾಗಿರುತ್ತಾರೆ. ಅವರುಗಳು  ಸಂಪ್ರದಾಯ ಮರೆಯದೆ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕೆಲ ಘಟನೆಗ ಳಿಂದ ನಮ್ಮ ಪಕ್ಷದವರ ಮೇಲೆಯೇ ನನಗೆ ಬೇಸರ ಉಂಟಾಗಿತ್ತು. ಅವರನ್ನು   ಸಸ್ಪೆಂಡ್ ಮಾಡಬೇಕಿತ್ತು ಎಂದು ಸಚಿವ ನಾರಾಯಣಸ್ವಾಮಿ ಹರಿಹಾಯ್ದರು.

ಪ್ರಧಾನಿ ಮೋದಿಯವರು ದಲಿತರು, ಹಿಂದು ಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆ ಯರು ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಅನೇಕ ಕಾರ್ಯಕ್ರಮಗಳ ಮೂಲಕ ಭ್ರಷ್ಟಾಚಾರ ಕಡಿಮೆ ಮಾಡಿದ್ದಾರೆ. ಗಂಭೀರ ಸಮಸ್ಯೆಗಳನ್ನು ಸರಳವಾಗಿಸಿದ್ದಾರೆ. ಇವೆಲ್ಲವುಗಳನ್ನು ಜನರಿಗೆ ತಿಳಿಸುವ  ಕಾರ್ಯಕ್ರಮ ಇದಾಗಿದೆ ಎಂದು ಸಚಿವ ನಾರಾಯಣಸ್ವಾಮಿ  ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದರು. ಆಡಳಿತ