ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿದರಗಡ್ಡೆ ಜಯಪ್ಪ

ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿದರಗಡ್ಡೆ ಜಯಪ್ಪ

ಹೊನ್ನಾಳಿ, ಆ.19-  ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿದರಗಡ್ಡೆ ಬಿ.ಹೆಚ್. ಜಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೃಷಿಕ ಸಮಾಜದ ಅಧ್ಯಕ್ಷರಾಗಿದ್ದ ಕುಂದೂರು ಹನುಮಂತಪ್ಪನವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕೃಷಿ ಕಚೇರಿಯಲ್ಲಿ ಚುನಾವಣೆ ನಡೆಸಲಾಯಿತು.

ಚುನಾವಣಾಧಿಕಾರಿಗಳು ಹಾಗು ಸಹಾಯಕ ಕೃಷಿ ನಿರ್ದೇಶಕರಾದ ಸುರೇಶರ ಜಯಪ್ಪ ಆಯ್ಕೆಗೊಂಡಿರುವುದಾಗಿ ಘೋಷಿಸಿದರು. ನಂತರ ನಡೆದ ಸಭೆಯಲ್ಲಿ ಕೃಷಿಕ ಸಮಾಜದ ನೂತನ ಜಿಲ್ಲಾ ಪ್ರತಿನಿಧಿಯಾಗಿ ಚಿಕ್ಕಹಾಲಿವಾಣದ ಎಲ್. ರುದ್ರನಾಯ್ಕ್ ಹೆಸರನ್ನು ಸಭೆಯಲ್ಲಿ ಚರ್ಚಿಸಿ ಆಯ್ಕೆ ಮಾಡಿ ಕಳಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜಯಪ್ಪನವರನ್ನು ಜಿಲ್ಲಾ ಪಂಚಾಯ್ತಿ  ಸದಸ್ಯ ಎಂ. ಮಹೇಶ್  ಸನ್ಮಾನಿಸಿ ಗೌರವಿಸಿದರು.

ಕೃಷಿಕ ಸಮಾಜದ ಉಪಾಧ್ಯಕ್ಷೆ ಆರುಂಡಿ ಜಯಮ್ಮ, ನಿರ್ದೇಶಕರಾಗಿ ಬೀರಗೊಂಡನಹಳ್ಳಿ ಶಿವನಗೌಡ, ಕ್ಯಾಸಿನಕೊಪ್ಪ ಕುಮಾರ್, ಕೆಂಚಿಕೊಪ್ಪ ರಾಮಲಿಂಗಪ್ಪ, ಬೆಳಗುತ್ತಿ ಉಮೇಶ್, ಆರುಂಡಿ ಸೋಮಶೇಖರಪ್ಪ, ಚಿಕ್ಕಹಾಲಿವಾಣದ ಎಲ್. ರುದ್ರನಾಯ್ಕ್, ಉಜ್ಜನಿಪುರ ಬಸವರಾಜಪ್ಪ, ನರಸಗೊಂಡನಹಳ್ಳಿ ಕೃಷ್ಣ ಮೂರ್ತಿ, ಮುಖಂಡರಾದ ದಿಡಗೂರು ಪಾಲಾಕ್ಷಪ್ಪ, ಆನಂದ ಇನ್ನಿತರರಿದ್ದರು.