ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಿಸಿದ 112 ತುರ್ತು ಪೊಲೀಸರು

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಿಸಿದ 112 ತುರ್ತು ಪೊಲೀಸರು

ದಾವಣಗೆರೆ, ಆ.19- ಪತಿಯ ಕಿರುಕುಳ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವಳ ಪ್ರಾಣವನ್ನು ಇಲ್ಲಿನ 112 ತುರ್ತು ಪೊಲೀಸರು ರಕ್ಷಿಸಿದ್ದಾರೆ. 

ಸುಮಾರು ಐದು ವರ್ಷಗಳಿಂದ ಪತಿಯು ಪ್ರತಿ ದಿನ ಕುಡಿದು ಬಂದು ಅವಾಚ್ಯವಾಗಿ ಬೈದಾಡಿ ಗಲಾಟೆ ಮಾಡುವುದಕ್ಕೆ ಮನನೊಂದ ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಉಕ್ಕಡಗಾತ್ರಿ ಗ್ರಾಮದ ತುಂಗಭದ್ರಾ ನದಿ ತೀರಕ್ಕೆ ಬಂದಿದ್ದಳು. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ 112 ತುರ್ತು ಪೊಲೀಸರು ಆತ್ಮಹತ್ಯೆಗೆ ಪ್ರಯತ್ನಿಸಿದ ನೊಂದ ಮಹಿಳೆಯ ಜೀವ ರಕ್ಷಿಸಿ, ಮಲೇಬೆನ್ನೂರು ಪೆೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕ್ರಮಕ್ಕೆ ಮಲೇಬೆನ್ನೂರು ಠಾಣೆಯ ಠಾಣಾಧಿಕಾರಿಗಳಿಗೆ ಒಪ್ಪಿಸಲಾಗಿದೆ.