ಅಪರಿಚಿತ ಮಹಿಳೆ ಶವ ಪತ್ತೆ

ದಾವಣಗೆರೆ, ಆ.19- ನಗರದ ಶಾಮನೂರು ಸರ್ವೀಸ್‌ ರಸ್ತೆಯಲ್ಲಿ ಸುಮಾರು 55-60 ವರ್ಷದ ಮೃತ ಮಹಿಳೆಯ ಶವ ನಿನ್ನೆ ಸಂಜೆ ಪತ್ತೆಯಾಗಿದೆ. 

ಈಕೆ ಹಸಿರು, ಕೆಂಪು ಬಣ್ಣದ ಹೂವುಗಳಿರುವ ನೈಟಿ, ನಶೆ ಕಲರ್‌ ಜೀನ್ಸ್‌ ಪ್ಯಾಂಟ್‌ ಧರಿಸಿದ್ದು, ಇವಳು ಕೋಲು ಮುಖ ಹೊಂದಿರುತ್ತಾರೆ. ಎಡಭಾಗದ ಹಣೆಯ ಮೇಲೆ ಗಾಯವಿರುತ್ತದೆ. 

ಸಂಬಂಧಪಟ್ಟವರು ವಿದ್ಯಾನಗರ ಪೊಲೀಸ್ ಠಾಣೆ (ಫೋನ್‌ : 08192-262688, ಮೊ : 94808 03251) ಅಥವಾ ಕೆಟಿಜೆ ನಗರ ವೃತ್ತ ಠಾಣೆ (ಫೋನ್‌ : 08192-259293) ಯನ್ನು ಸಂಪರ್ಕಿಸಬಹುದು.