ನಗರದ ವಿವಿಧೆಡೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ದಾವಣಗೆರೆ, ಆ. 17- ನಗರ ಹಾಗೂ ನಗರದ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ವಿವಿಧೆಡೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ದಾವಣಗೆರೆ ವಿಶ್ವವಿದ್ಯಾನಿಲಯ : ದಾವಣಗೆರೆ ವಿಶ್ವವಿದ್ಯಾನಿಲಯ ಆವರಣ ದಲ್ಲಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಧ್ವಜಾರೋಹಣ ನೆರವೇರಿಸಿದರು. ಕಾರ್ಯ ಕ್ರಮದಲ್ಲಿ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ, ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್, ಹಣಕಾಸು ಅಧಿಕಾರಿ ಪ್ರಿಯಾಂಕ ಡಿ, ಡೀನ್‍ ಪ್ರೊ. ಕೆ.ಬಿ.ರಂಗಪ್ಪ, ಪ್ರೊ. ಜೆ.ಕೆ. ರಾಜು, ಪ್ರೊ. ವಿ.ಕುಮಾರ್, ಡಾ. ವೆಂಕಟೇಶ, ಎನ್‍ಎಸ್‍ಎಸ್ ಸಂಯೋ ಜನಾಧಿಕಾರಿ ಡಾ. ಗಿರೀಶ್, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. 

ಸಿದ್ಧಗಂಗಾ ಶಾಲೆ : ನಗರದ ಸಿದ್ಧಗಂಗಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಲಕಿಯರಾದ ಅನುಷಾ ಗ್ರೇಸ್, ವಿಜೇತಾ ಮುತ್ತಗಿ ಅವರಿಂದ ಧ್ವಜಾರೋ ಹಣ ನೆರವೇರಿಸಲಾಯಿತು. ಸಿದ್ಧಗಂಗಾ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ.ಪೂ. ಕಾಲೇಜಿನ ಇತಿಹಾಸ ಉಪನ್ಯಾಸಕ ಶಿವಲಿಂ ಗಪ್ಪ, ಸಂಸ್ಥೆಯ ನಿರ್ದೇಶಕ ಡಾ. ಜಯಂತ್, ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ, ಸಂಸ್ಥೆಯ ಅಧ್ಯಕ್ಷ ಪ್ರಶಾಂತ್, ಸದಾಶಿವ ಹೊಳ್ಳ, ತೇಜಸ್ವಿನಿ, ನಿರ್ಮಲ ಗುಬ್ಬಿ, ಸಿಂಚನ, ಕಾವ್ಯ ರುದ್ರಾಕ್ಷಿಬಾಯಿ ಹಾಗೂ ನಾಗರಾಜ್ ಉಪಸ್ಥಿತರಿದ್ದರು.

ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ : ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಸ್ಥರುಗಳಾದ ಎಸ್.ಆರ್. ಶಿರಗಂಬಿ, ಡಾ. ಪಿ.ಎಂ. ಪ್ರೇಮ, ಡಾ. ಜಿ.ಎನ್.ಹೆಚ್. ಕುಮಾರ್, ಪ್ರಸಾದ್ ಬಂಗೇರಾ, ಎ.ಎಸ್. ಕುಸುಮ, ಉಪಸ್ಥಿತರಿದ್ದರು. ಕು. ಜಿ.ಎಂ. ಸಿಂಧು, ಪೂಜಾ ಪಾಟೀಲ್ ಜಿ.ಎಸ್., ಕೆ. ಶಿವರಾಜ್ ಕಾರ್ಯಕ್ರಮ ನಿರ್ವಹಿಸಿದರು.

ಎವಿಕೆ ಕಾಲೇಜು : ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಬಿ. ಶಿವನಗೌಡ ಉಪಸ್ಥಿತರಿದ್ದರು. ಎನ್‌ಸಿಸಿ ಅಧಿಕಾರಿಗಳಾದ  ಶ್ರೀಮತಿ ರಶ್ಮಿ, ಶ್ರೀಮತಿ ಪ್ರಭಾವತಿ ಎಸ್. ಹೊರಡಿ, ಕ್ರೀಡಾ ವಿಭಾಗದ ಮುಖ್ಯಸ್ಥ ಆರ್. ಚನ್ನಬಸವ ನಗೌಡ ಕಾರ್ಯಕ್ರಮ ನಿರ್ವಹಿಸಿದರು.

ಜಿಎಂಐಟಿ : ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿ ಪ್ರತಿನಿಧಿ ವೈ.ಯು. ಸುಭಾಶ್ಚಂದ್ರ, ಕಾರ್ಯಕ್ರಮದ ಸಂಯೋಜಕ ಹೆಚ್.ಎಸ್. ಓಂಕಾರಪ್ಪ, ದೈಹಿಕ ಶಿಕ್ಷಕ ಜಿ.ಬಿ. ಅಜ್ಜಯ್ಯ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ಕೆ.ಎಂ. ಪುಣ್ಯಶ್ರೀ, ಸಂಜನಾ ನಿರೂಪಿಸಿದರು. ಕು. ಶ್ರೀರಕ್ಷಿತಾ ಸ್ವಾಗತಿಸಿದರು. ಗಗನ ವಂದಿಸಿದರು.

ಇನ್ನರ್‌ವ್ಹೀಲ್ : ಇನ್ನರ್‌ವ್ಹೀಲ್ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಬಿಲ್ಲಳ್ಳಿ, ರೋಟರಿ ಅಧ್ಯಕ್ಷರಾದ ಆಂಜನೇಯ ಮೂರ್ತಿಯವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಇನ್ನರ್‌ವ್ಹೀಲ್ ಕಾರ್ಯದರ್ಶಿ ರತ್ನ ಪಾಟೀಲ್, ರೋಟರಿ ಕಾರ್ಯದರ್ಶಿ ದಯಾನಂದ್ ಹಾಗೂ ಹಿರಿಯ ಇನ್ನರ್‌ವ್ಹೀಲ್ ಸದಸ್ಯರಾದ ನಿರ್ಮಲಾ ಮಹೇಶ್ವರಪ್ಪ, ನಾಗೇಂದ್ರಮ್ಮ ಪರಮೇಶ್ವರಪ್ಪ ಉಪಸ್ಥಿತರಿದ್ದರು.

ಬಳ್ಳಾರಿ ಸಿದ್ದಮ್ಮ ಪಾರ್ಕ್ : ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಜುಳಾ ಮಹೇಶ್ ಅವರ ನೇತೃತ್ವದಲ್ಲಿ ಸಿದ್ದಮ್ಮ ಪುತ್ಥಳಿಗೆ ಪುಷ್ಪಾರ್ಚನೆಯೊಂದಿಗೆ ನೆರವೇರಿಸಲಾಯಿತು. ಬಳ್ಳಾರಿ ಸಿದ್ದಮ್ಮನವರ ಮೊಮ್ಮಗ ಚಿಟ್ರಕಿ ಶಿವಕುಮಾರ್ ವಚನ ಗೀತೆ ಹಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಮತಿ ಸುಧಾ ಜಯರುದ್ರೇಶ್, ಜಿಲ್ಲಾಧ್ಯಕ್ಷ  ವೀರೇಶ್ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಪ್ರಮೀಳ ನಲ್ಲೂರು, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪುಷ್ಪಾ ವಾಲಿ, ಶ್ರೀಮತಿ ಭಾಗ್ಯ ಪಿಸಾಳೆ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ರೂಪ ಕಾಟ್ವೆ, ಉತ್ತರ ಮಂಡಲದ ಅಧ್ಯಕ್ಷರಾದ ಶ್ರೀಮತಿ ಸರ್ವಮಂಗಳ, ದಕ್ಷಿಣ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಶ್ಯಾಗಲೆ, ಪದಾಧಿಕಾರಿಗಳಾದ ಚಂದ್ರಿಕ, ರೂಪ, ಮಂಜುಳ, ಮಂಗಳ, ಸರಸ್ವತಿ, ಚಲತಾ, ಶ್ವೇತಾ, ಸೌಮ್ಯ, ಕುಮಾರಿ, ಲಕ್ಷ್ಮಿ, ಸರಸ್ವತಿ, ಮಂಜುಳಾ, ಬಿ. ವಿಜಯಲಕ್ಷ್ಮಿ ವೀಣಾ ಮತ್ತಿತರರು ಉಪಸ್ಥಿತರಿದ್ದರು.

ಚುಟುಕು ಸಾಹಿತ್ಯ ಪರಿಷತ್ : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಅಜಯ್ ಭಾರತೀಯ ಧ್ವಜಾರೋಹಣ ನೆರವೇರಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಾಜಶೇಖರ್ ಗುಂಡಗಟ್ಟಿ, ಜಿಲ್ಲಾ ಕಾರ್ಯದರ್ಶಿ ಅಣಬೇರು ತಾರೇಶ್, ಸಂಚಾಲಕ ಬಿ.ಎನ್. ಪಾಟೀಲ್, ಬಿ.ಎಂ.ಜಿ. ವೀರೇಶ್, ಜಿಲ್ಲಾ ಉಪಾಧ್ಯಕ್ಷ ಓಂಕಾರಯ್ಯ ತವನಿಧಿ, ಎಂ. ಬಸವರಾಜು, ಚಿತ್ರ ಕಲಾವಿದರಾದ ಅತೀಕ್, ಚಂದ್ರಶೇಖರ್ ಸಂಗಾ, ಕಾಳಿಂಗರಾವ್ ಉಪಸ್ಥಿತರಿದ್ದರು. ಸುನೀತಾ ಪ್ರಕಾಶ್ ವಂದಿಸಿದರು.

ಕರ್ನಾಟಕ ಬಂಜಾರ ರಕ್ಷಣಾ ವೇದಿಕೆ : ಭಗೀರಥ ವೃತ್ತದ ಬಳಿ ಇರುವ ಜಿಲ್ಲಾ ಕಛೇರಿಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಗೌರವಾಧ್ಯಕ್ಷ ವೆಂಕಟೇಶ್ ನಾಯ್ಕ, ರಾಜ್ಯ ಅಧ್ಯಕ್ಷ ಕೆ.ಡಿ. ನಾಯ್ಕ, ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಾನಾಯ್ಕ, ಹಾಲೇಕಲ್ಲು, ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ಎನ್. ರಾಥೋಡ್, ರಾಜ್ಯ ಖಜಾಂಚಿ ಮಂಜಾನಾಯ್ಕ, ರಾಜ್ಯ ಯುವ ಘಟಕದ ಅಧ್ಯಕ್ಷ ಶಿವಣ್ಣ ನಾಯ್ಕ, ದಾವಣಗೆರೆ ಜಿಲ್ಲಾ ಅಧ್ಯಕ್ಷ  ಶಂಕರ್ ನಾಯ್ಕ, ಜಿಲ್ಲಾ ಕಾರ್ಯಾಧ್ಯಕ್ಷ ಡಿ. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕುಬೇರ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಶಿವಣ್ಣ ಸೀತಿಮನಿ, ಜಿಲ್ಲಾ ಸಹ ಕಾರ್ಯದರ್ಶಿ ಚಂದ್ರಶೇಖರ್ ನಾಯ್ಕ, ಶಶಿ ನಾಯ್ಕ ಉಪಸ್ಥಿತರಿದ್ದರು.

ಮಡಿಕಟ್ಟಿ ಸಮಿತಿ : ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡ ನಾಗರಾಜ್, ಮಡಿಕಟ್ಟೆಯ ಅಧ್ಯಕ್ಷ ಪಕ್ಕೀರಸ್ವಾಮಿ, ಕಾರ್ಯದರ್ಶಿ ಸಿದ್ದೇಶ್ ರವಿಕುಮಾರ್, ಅಜೇಯ, ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿಗಾರರ ಕೂಟ : ಕೂಟದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದೊಡ್ಮನಿ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಸಂಸ್ಥಾಪಕ ಅಧ್ಯಕ್ಷ ಕೆ. ಏಕಾಂತಪ್ಪ, ಪ್ರಧಾನ ಕಾರ್ಯ ದರ್ಶಿ ಮಂಜುನಾಥ್ ಕಾಡಜ್ಜಿ, ತಾರಾ ನಾಥ್, ನಂದಕುಮಾರ್, ವರದರಾಜ್, ಕಿರಣ್, ಪುನೀತ್, ವರದರಾಜ್, ಸತೀಶ್, ನೂರ್ ಉಲ್ಲಾ, ವೀರೇಶ್, ನಿಂಗಪ್ಪ, ಮಹಾದೇವ್, ಯೋಗೇಶ್, ಶೀಲವಂತ್, ಭಾಸ್ಕರ್, ಪ್ರಕಾಶ್, ನಿವೃತ್ತ ಮುಖ್ಯಶಿಕ್ಷಕ ಎ.ಕೆ. ರಾಮಪ್ಪ ಉಪಸ್ಥಿತರಿದ್ದರು.

ಮೆಕ್ಯಾನಿಕ್ ಸಂಘ : ಪಾಲಿಕೆ ಸದಸ್ಯ ಸೈಯದ್ ಚಾರ್ಲಿ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ತಿಪ್ಪೇಶ್, ಪದಾಧಿಕಾರಿಗಳಾದ ರಿಯಾಜ್ ಅಹ್ಮದ್, ಫಕೀರಸ್ವಾಮಿ, ಹನುಮಂತಪ್ಪ, ನಾಜೀರ್ ಹುಸೇನ್, ಸೈಯದ್ ಬುರಹಾನ್, ಬಿ.ಆರ್. ಗಿರಿರಾಜು, ಮಹೇಶ್, ದಾದಾಪೀರ್, ಸೈಯದ್ ಸಾಧಿಕ್ ಮತ್ತಿತರರು ಉಪಸ್ಥಿತರಿದ್ದರು.

ತಾಲ್ಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ ಸಂಘ, ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ಸಮರ ಸೇನೆ : ಪಿಸಾಳೆ ಕಾಂಪೌಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರ ಬಿ.ಜೆ. ಅಜಯ್‌ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಮುಖ್ಯ ಅತಿಥಿ ಗಳಾಗಿ ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ. ಮನು, ಕನ್ನಡ ಸಮರ ಸೇನೆಯ ರಾಜ್ಯ ಮಹಿಳಾ ಅಧ್ಯಕ್ಷರಾದ  ದ್ರಾಕ್ಷಾಯಣಮ್ಮ  ಮಲ್ಲಿಕಾರ್ಜುನಯ್ಯ, ಕನ್ನಡ ಸಮರ ಸೇನೆಯ ರಾಜ್ಯಾಧ್ಯಕ್ಷ ಕೋಟ್ಯಾಳ ಸಿದ್ದೇಶ್, ಕನಕ ಯುವಸೇನ ಜಿಲ್ಲಾಧ್ಯಕ್ಷ ಎಚ್ ವೈ ಶಶಿಧರ್,  ತಾಲ್ಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಉಪಾಧ್ಯಕ್ಷ ಕಿರಣ್, ಸಂಚಾಲಕ ಮಲ್ಲೇಶ್, ನಿರ್ದೇಶಕರಾದ ಪಂಚಾಕ್ಷರಯ್ಯ, ರಾಮು, ಗಗನ್, ರಾಯ್ಕರ್, ಕನ್ನಡ ಸಮರ ಸೇನೆ, ರಾಜ್ಯ ಖಜಾಂಚಿ ರಾಜೇಶ್ವರಿ  ಟಿ.ಎಂ,  ಪ್ರಧಾನ ಕಾರ್ಯದರ್ಶಿ ಸಂಗೀತ, ಜಿಲ್ಲಾ ಉಪಾಧ್ಯಕ್ಷ ನಾಗರತ್ನ ಆನಂದ್, ಕರ್ನಾಟಕ ರಕ್ಷಣಾ ಗಜಸೇನೆಯ, ನಿಂಗರಾಜ್, ಮಹಿಳಾ ಅಧ್ಯಕ್ಷ ಶ್ರೀಮತಿ ಗೀತಾ, ಭರತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೋಮೇಶ್ವರ ವಿದ್ಯಾಲಯ : ಬಿಜೆಪಿ ಹಾವೇರಿ ಜಿಲ್ಲಾ ಸಂಘಟನಾ ಉಸ್ತುವಾರಿ ಎಲ್.ಎನ್. ಕಲ್ಲೇಶ್ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್, ಪ್ರಾಂಶುಪಾಲರಾದ ಎನ್. ಪ್ರಭಾವತಿ, ಆಡಳಿತಾಧಿಕಾರಿ ಎಂ.ಆರ್. ಹರೀಶ್ ಬಾಬು, ಮುಖ್ಯೋಪಾಧ್ಯಾಯರಾದ ಗಾಯತ್ರಿ, ಮಾಲಾ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಬೀರೇಶ್ವರ ಜಾಗ ಅಭಿವೃದ್ಧಿ ಟ್ರಸ್ಟ್ : ಗೌರವ ಕಾರ್ಯದರ್ಶಿ ಜೆ.ಕೆ. ಕೊಟ್ರಬಸಪ್ಪ ಧ್ವಜಾರೋಹಣ ನೆರವೇರಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ್, ಜಯಣ್ಣ, ರವಿ ಕನ್ನವರ, ವೆಂಕಟೇಶ್, ಹೆಚ್.ಎನ್. ಪ್ರಕಾಶ್, ಲಿಂಗರಾಜು, ಕವಿರಾಜ, ಲೋಹಿತ್ ಇಟ್ಟಿಗುಡಿ, ಜಿ. ಪರಮೇಶ್, ಆರ್.ಪಿ. ಮೋಹನ್ ಕುಮಾರ್, ಹೆಚ್.ಆರ್. ಪ್ರಭು, ಹೆಚ್.ಆರ್. ನರಸಿಂಹ, ಈಶ್ವರ್ ಪೂಜಾರ್ ಉಪಸ್ಥಿತರಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ : ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಧ್ವಜಾರೋಹಣ ನೆರವೇರಿಸಿದರು.  ಜಿಲ್ಲಾ ಗೌರವಾಧ್ಯಕ್ಷ ವಾಸುದೇವ್ ರಾಯ್ಕರ್, ಮಲ್ಲಿಕಾರ್ಜುನ್, ಕೆ.ಜಿ. ಬಸವರಾಜ್, ಎಂ.ಡಿ. ರಫೀಕ್, ರಶೀದ್ ಅಹ್ಮದ್, ಖಾದರ್, ಜಿ.ಎಸ್. ಸಂತೋಷ್, ಸಂಜಯ್, ಶ್ರೀನಿವಾಸ್ ಚಿನ್ನಿಕಟ್ಟಿ, ಸುರೇಶ್, ಶ್ರೀನಿವಾಸ್, ತುಳಸಿರಾಮ್, ಧೀರೇಂದ್ರ, ರಾಕೇಶ್, ನಾಗರಾಜ್, ಚಂದ್ರು, ಕಾಲುಲಾಲ್ ಚೌದ್ರಿ, ನಾಗರಾಜ್, ಮಂಜುನಾಥ್, ರಮೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ, ಮಂಜುಳಮ್ಮ ಮತ್ತಿತರರು ಉಪಸ್ಥಿತರಿದ್ದರು.

ರಾಘವೇಂದ್ರ ಹೈಟೆಕ್ ಪ.ಪೂ. ಕಾಲೇಜು : ಸಂಸ್ಥೆಯ ಟ್ರಸ್ಟಿ ಮಂಜುಷಾ ಸೈಮನ್ ಧ್ವಜಾರೋಹಣ ನೆರವೇರಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶ್ಯಾಗಲೆ ಉಪಸ್ಥಿತರಿದ್ದರು.

ಜಿ.ಕೆ. ಉರ್ದು ಹೈಯರ್ ಪ್ರೈಮರಿ ಸ್ಕೂಲ್ : ಗುಲ್ಜಾರ್ – ಅದಬ್ ಸಂಸ್ಥೆಯ ಕಾರ್ಯದರ್ಶಿ ಟಿ. ಅತಾವುಲ್ಲಾ ಧ್ವಜಾರೋಹಣ ನೆರವೇರಿಸಿದರು.  ಜಂಟಿ ಕಾರ್ಯದರ್ಶಿ ಪತ್ರಕರ್ತ ತಾರಿಕ್ ನಕಾಶ್, ಮುಖ್ಯೋಪಾಧ್ಯಾಯರಾದ ಮಾಸೂಮ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

ಕದಂಬ ಉದ್ಯಾನವನ : ಜಯನಗರ ಸಿ ಬ್ಲಾಕ್‌ನ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಪಿ. ಅಂಜನಪ್ಪ ಧ್ವಜಾರೋಹಣ ನೆರವೇರಿಸಿದರು. ಗೌರವಾಧ್ಯಕ್ಷ ಎ.ವೈ. ಪ್ರಕಾಶ್, ಉಪಾಧ್ಯಕ್ಷ ಹಾಗೂ ನಿವೃತ್ತ ಉಪನ್ಯಾಸಕ ಬಿಕ್ಕೋಜಪ್ಪ, ಅಂಜನಮೂರ್ತಿ, ತಿಪ್ಪೇಸ್ವಾಮಿ, ಪಿ.ಎಸ್. ನಾಗರಾಜ್, ಅನಂತ ಶೆಟ್ರು, ಸುರೇಶ್, ಮೈಲಾರಪ್ಪ, ಶಂಕರಾಚಾರ್ಯ, ಶಿವಮೂರ್ತಿ, ರುದ್ರೇಶ್, ಬೈರೇಶ್, ಸುರೇಶ, ಇಟಗಿ ನಿಂಗಪ್ಪ, ರುದ್ರಪ್ಪ, ಪತ್ರಕರ್ತ ಎಂ.ವೈ. ಸತೀಶ್ ಹಾಗೂ ಕೆ. ಚಂದ್ರಪ್ಪ ಉಪಸ್ಥಿತರಿದ್ದರು.

ದಾರುಲ್ ಉಲೂಮ್ ರಜಾವುಲ್ ಮುಸ್ತಫಾ ವ ದಾರುಲ್ ಯಾತಾಮಾ ಸಂಸ್ಥೆ : ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೌಲಾನಾ ಮಹ್ಮದ್ ಹನೀಫ್ ರಜಾ ಖಾದ್ರಿ ಧ್ವಜಾರೋಹಣ ನೆರವೇರಿಸಿದರು. ಆಜಾದ್ ನಗರ ಪೊಲೀಸ್ ಠಾಣೆಯ ಮಾಲತೇಶ್, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಖಾದರ್ ಭಾಷಾ, ಸಂಸ್ಥೆಯ ಪ್ರಾಂಶುಪಾಲ ಮೌಲಾನಾ ಮಹ್ಮದ್ ಅಲೆ ರಜಾ ಖಾದ್ರಿ, ಸಹ ಪ್ರಾಂಶುಪಾಲ ಮೌಲಾನಾ ಮಹ್ಮದ್ ಅಲಿ ರಜಾ ಖಾದ್ರಿ, ಶಿಕ್ಷಕರಾದ ಮೌಲಾನಾ ಮುಜಾಹಿದ್ ರಜಾ ಖಾನ್, ಹಾಫೀಜ್‌ ಸೈಯದ್ ಗೌಸ್, ಹಾಫೀಜ್‌ ಮಹ್ಮದ್ ಸಾಧಿಕ್, ಹಾಫೀಜ್ ಮಜರ್ ಖಾನ್, ಹಾಫೀಜ್ ಮಹಬೂಬ್ ಭಾಷಾ ಮತ್ತಿತರರು ಉಪಸ್ಥಿತರಿದ್ದರು.