ನಂದಿ ಸೌಹಾರ್ದದಿಂದ ಭದ್ರೆಗೆ ಬಾಗಿನ

ನಂದಿ ಸೌಹಾರ್ದದಿಂದ ಭದ್ರೆಗೆ ಬಾಗಿನ

ಮಲೇಬೆನ್ನೂರು, ಆ.17- ಪಟ್ಟಣದ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಲಾಯಿತು.

ಸಹಕಾರಿ ಅಧ್ಯಕ್ಷ ಹಳ್ಳಿಹಾಳ್‌ ವೀರನಗೌಡ, ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಬಿ.ಜಿ. ಪಾಲಾಕ್ಷಪ್ಪ, ನಿರ್ದೇಶಕರಾದ ಹಳ್ಳಿಹಾಳ್‌ ಹೆಚ್‌.ಟಿ. ಪರಮೇಶ್ವರಪ್ಪ, ಎ.ಕೆ. ತಿಪ್ಪೇಶಪ್ಪ, ಕೊಕ್ಕನೂರಿನ ಬಿ.ಹೆಚ್‌. ರವಿ, ಟಿ. ರಾಮಚಂದ್ರಪ್ಪ, ಕೆ.ಪಿ. ಆಂಜನೇಯ ಪಾಟೀಲ್‌, ಹಿಂಡಸಘಟ್ಟಿಯ ಶ್ರೀಮತಿ ಭಾಗ್ಯ ಉದಯಗೌಡ, ಮಲೇಬೆನ್ನೂರಿನ ಎ. ಆರೀಫ್‌ ಅಲಿ, ಸಿಇಓ ಹೆಚ್‌.ಎಂ. ಬಸವರಾಜ್‌, ಕಾನೂನು ಸಲಹೆಗಾರ ನಂದಿತಾವರೆ ತಿಮ್ಮನಗೌಡ, ಸಿಬ್ಬಂದಿಗಳಾದ ಜಿ.ಎಂ. ನಾಗನಗೌಡ ರುದ್ರಗೌಡ, ಸುಮಾ, ಸುಭಾಷ್‌ ಮತ್ತಿತರರು ಭಾಗವಹಿಸಿದ್ದರು.