ಶಾಸಕ ಎಂಪಿಆರ್‌ಗೆ ವಿಶೇಷ ಕೊರೊನಾ ವಾರಿಯರ್ಸ್ ಪ್ರಶಸ್ತಿ

ಹೊನ್ನಾಳಿ, ಆ.15- ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ದಿಂದ ನಾಳೆ ದಿನಾಂಕ 16ರ ಸೋಮ ವಾರ ಬೆಳಗ್ಗೆ 11 ಗಂಟೆಗೆ ಪುರಸಭಾ ಸಭಾಭವನದಲ್ಲಿ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆಯನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಲಿದ್ದಾರೆ.

ತಾಲ್ಲೂಕು ಕಾರ್ಯನಿರತ ಪತ್ರಕ ರ್ತರ ಸಂಘದ ಅಧ್ಯಕ್ಷ ಹೆಚ್.ಸಿ. ಮೃತ್ಯುಂಜಯ ಪಾಟೀಲ್ ಅಧ್ಯಕ್ಷತೆ ವಹಿಸುವರು. ಸಂಘವು ಶಾಸಕ ರೇಣು ಕಾಚಾರ್ಯರಿಗೆ ವಿಶೇಷ ಕೊರೊನಾ ವಾರಿಯರ್ಸ್ ಪ್ರಶಸ್ತಿ ಪ್ರದಾನ ಮಾಡ ಲಿದೆ. ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತ ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್‍ ಅವರನ್ನು ಸನ್ಮಾನಿಸಲಾ ಗುತ್ತದೆ. ಮುಖ್ಯ ಅತಿಥಿಗಳಾಗಿ ಹೊನ್ನಾಳಿ ಪುರಸಭೆ ಅಧ್ಯಕ್ಷ ಕೆ.ವಿ. ಶ್ರೀಧರ್, ತಹಶೀಲ್ದಾರ್ ಬಸವನ ಗೌಡ ಕೋಟೂರ. ಸಿಪಿಐ ದೇವರಾಜ್‍ ಭಾಗವಹಿಸುವರು. ಸ.ಪ.ಪೂ. ಕಾಲೇ ಜು ಉಪನ್ಯಾಸಕ ಹೊನ್ನಾಳಿಯ ಕೆ. ನಾಗರಾಜ್ ಉಪನ್ಯಾಸ ನೀಡಲಿದ್ದಾರೆ.