ಸಾಧನಾ ವೃದ್ಧಾಶ್ರಮಕ್ಕೆ ಭೋಜನ ಜತೆ ಆಹಾರ ದಿನಸಿ ವಿತರಣೆ

ಸಾಧನಾ ವೃದ್ಧಾಶ್ರಮಕ್ಕೆ ಭೋಜನ ಜತೆ ಆಹಾರ ದಿನಸಿ ವಿತರಣೆ

ದಾವಣಗೆರೆ, ಜು. 26- ತುರ್ಚಘಟ್ಟದ ಸಾಧನಾ ವೃದ್ಧಾಶ್ರಮ ಮತ್ತು‌ ಅನಾಥಾಶ್ರಮದಲ್ಲಿ ನಗರದ ಆರ್ಯ ವೈಶ್ಯ ಮುಖಂಡರು, ಎಸ್.ಕೆ.ಪಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಪಿ.ನಾಗಭೂಷಣ್ ಅವರ 75ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಾಧನಾ ವೃದ್ಧಾಶ್ರಮ ಮತ್ತು‌ ಅನಾಥಾಶ್ರಮದ ವೃದ್ಧರು ಹಾಗೂ ಅನಾಥರಿಗೆ ಭೋಜನದ ವ್ಯವಸ್ಥೆ ಯನ್ನು ಏರ್ಪಡಿಸಲಾಗಿತ್ತು. ಬಿ.ಪಿ.ನಾಗಭೂಷಣ್ ಅವರು ಭೋಜನ ವ್ಯವಸ್ಥೆಯ ಜೊತೆಗೆ ಆಹಾರ ದಿನಸಿಗಳನ್ನು ಆಶ್ರಮಕ್ಕೆ ನೀಡಿದರು.

ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಪುಷ್ಪಲತ ಅವರು, ನಾಗಭೂಷಣ್ ಅವರಿಗೆ ಜನ್ಮ ದಿನದ ಶುಭಾಶಯ ಹೇಳಿದರು. ಇದೇ ವೇಳೆ ಅವರು ಮಾತನಾಡಿ, ಮನೆಯಲ್ಲಿ ಉಪಯೋಗಿಸದೇ ಇರುವ ವಸ್ತುಗಳಿದ್ದರೆ ಆಶ್ರಮಕ್ಕೆ ತಲುಪಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿ.ಪಿ. ನಾಗಭೂಷಣ್ ಅವರನ್ನು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘದಿಂದ ಸನ್ಮಾನಿಸಲಾಯಿತು. ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ್, ಕಾರ್ಯಾಧ್ಯಕ್ಷ ಕಾಸಲ್ ಸತೀಶ್, ಆರ್ಯವೈಶ್ಯ ಮುಖಂಡರಾದ ಎ.ಎಸ್.ಸತ್ಯನಾರಾಯಣ ಸ್ವಾಮಿ, ಕೆ.ಎನ್.ಅನಂತರಾಮ ಶೆಟ್ಟಿ, ಎಂ.ಕೆ.ನಾಗೇಂದ್ರ, ನಾಗರಾಜ ಗುಪ್ತ, ಕೃಷ್ಣಮೂರ್ತಿ, ರಂಗನಾಥಶಟ್ಟಿ, ಬಿ.ಎಸ್.ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.