ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬಿದ ಹರಿಹರದ ನ್ಯಾಯಾಧೀಶರು

ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬಿದ ಹರಿಹರದ ನ್ಯಾಯಾಧೀಶರು

ಹರಿಹರ, ಜು. 26- ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಯೋಗಕ್ಷೇಮದಿಂದ ಇರುವಂತೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಯಶವಂತ್ ಅವರು ಗಂಗಾನಗರದ ನಿವಾಸಿಗಳಿಗೆ ಹೇಳಿದರು.

ಗಂಗಾನಗರ ಬಡಾವಣೆಗೆ ಮತ್ತು ಎಪಿಎಂಸಿ ಆವರಣದಲ್ಲಿರುವ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ನಿವಾಸಿಗಳ ಯೋಗಕ್ಷೇಮ ವಿಚಾರಿಸಿದರು.

ಮಾನವ ಹಕ್ಕುಗಳಿಗೆ ಚ್ಯುತಿ ಬಂದರೆ ಅಥವಾ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿರುವ ವಿಚಾರವನ್ನು ಹೈಕೋರ್ಟ್‌ ಗಮನಕ್ಕೆ ತಂದು ಶಾಶ್ವತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಶಶಿಧರ್, ತಾಲ್ಲೂಕು ಆಡಳಿತದ ಹೆಚ್. ಜಿ. ಹೇಮಂತ್, ಆನಂದ್, ದೇವರಾಜ್, ಪ್ರಭುಸ್ವಾಮಿ, ನಗರಸಭೆ  ವಸಂತ್, ಪ್ರಕಾಶ್, ಪೊಲೀಸ್ ಸಿಬ್ಬಂದಿ ಮಂಜುನಾಥ್, ಆರೋಗ್ಯ ಇಲಾಖೆ ವಿಮಲಾನಾಯ್ಕ್ ಇತರರು ಹಾಜರಿದ್ದರು.