ಹೊನ್ನಾಳಿ : 10 ಕುಟುಂಬಗಳಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ

ಹೊನ್ನಾಳಿ : 10 ಕುಟುಂಬಗಳಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ

ಹೊನ್ನಾಳಿ, ಜು.23- ಪಟ್ಟಣದ ತುಂಗಭದ್ರ ನದಿಯ ನೀರಿನ ಮಟ್ಟ ಇಂದು 10.21 ಮೀ ತಲುಪಿದ್ದು, ಅಪಾಯ ಮಟ್ಟದತ್ತ ಹೆಚ್ಚುತ್ತಿದ. ಪಟ್ಟಣದ ಬಾಲರಾಜ್ ಘಾಟ್‌ನಲ್ಲಿ ವಾಸವಾಗಿದ್ದ 10 ಕುಟುಂಬಗಳ ಜನತೆಯನ್ನು ಸುರಕ್ಷತೆಗಾಗಿ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಗೊಳಿಸ ಲಾಗಿದೆ ಎಂದು ತಹಶೀಲ್ದಾರ್ ಬಸವನಗೌಡ ಕೋಟೂರ ಹೇಳಿದರು. 

ನದಿ ನೀರಿನ ಮಟ್ಟದ ಬಗ್ಗೆ ನಿರಂತರ ಗಮನ ಇರಿಸಲಾಗಿದೆ ಎಂದ ಅವರು, ಮಳೆಯಿಂದಾಗಿ ತಾಲ್ಲೂಕಿನಲ್ಲಿ 21 ಕಚ್ಚಾ 1 ಪಕ್ಕ ಮನೆ ಹಾನಿ ಸಂಭವಿಸಿದ್ದು 11 ಲಕ್ಷ ರೂ.ಗಳ ಅಂದಾಜು ನಷ್ಟ ಸಂಭವಿಸಿದೆ ಎಂದರು. 

ಗಂಜಿ ಕೇಂದ್ರ : ಜನರ ಸುರಕ್ಷತೆಗಾಗಿ ವಸತಿ ಹಾಗು ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು ಆರೋಗ್ಯ ತಪಾಸಣೆಗೆ ಮುಂದಾಗಿದೆ ಎಂದರು. ನಿರಂತರ ಮಳೆಯ ಕಾರಣದಿಂದ 22 ಮನೆಗಳಿಗೆ ಹಾನಿಯಾಗಿದೆ. ಒಟ್ಟು 11.50 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹೊನ್ನಾಳಿಯ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು, ಪಟ್ಟಣದ ತಗ್ಗುಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. 

ಸಿಪಿಐ ಟಿ.ವಿ. ದೇವರಾಜ್, ಪಿಎಸ್‌ಐ ಬಸನಗೌಡ ಬಿರಾದಾರ ಮತ್ತಿತರ ಅಧಿಕಾರಿಗಳ ತಂಡ ಶುಕ್ರವಾರ ನದಿ ತೀರದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನದಿ ದಂಡೆಯ ಬಳಿ ವಾಸವಾಗಿರುವ ಕುಟುಂಬದವರನ್ನು ಬಾಲರಾಜ್ ಘಾಟ್ ಪ್ರದೇಶದಲ್ಲಿನ ಡಾ. ಅಂಬೇಡ್ಕರ್ ಭವನಕ್ಕೆ ಸ್ಥಳಾಂತರವಾಗಲು ಸೂಚಿಸಲಾಯಿತು.