ದರೋಡೆ : ಮೂವರ ಬಂಧನ

ದಾವಣಗೆರೆ, ಜು.20- ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಸ್ಥಳೀಯ ಗ್ರಾಮಾಂತರ ಪೊಲೀಸರು, ಮೊಬೈಲ್ ಫೋನ್, 3,550 ರೂ. ನಗದು, ಒಂದು ಬೈಕ್‍  ವಶಪಡಿಸಿಕೊಂಡಿದ್ದಾರೆ.

ನಗರದ ಎಸ್.ಎಸ್.ಎಂ ನಗರ ‘ಬಿ’ ಬ್ಲಾಕ್ ವಾಸಿಗಳಾದ ಜಿಶಾನ್ (20), ಅಬ್ದುಲ್ ಅಪ್ತಾಬ್ (20), ಜಬಿವುಲ್ಲಾ (19) ಬಂಧಿತರು.

ಚಿಕ್ಕಬೂದಿಹಾಳ್ ಗ್ರಾಮದ ಬೂಸವ್ವನಹಟ್ಟಿ ರಸ್ತೆಯಲ್ಲಿ ಬೂಸವ್ವನ ಹಟ್ಟಿಯ ರೇವಣ್ಣಸಿದ್ದಪ್ಪ ಇದೇ ದಿನಾಂಕ 10ರಂದು ರಾತ್ರಿ 8 ಗಂಟೆ ಸಮಯದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ, ಆರೋಪಿತರು ಬೈಕ್‍ ಹಿಂಬಾ ಲಿಸಿಕೊಂಡು ಬಂದು ವಿನಾಕಾರಣ ಜಗಳ ತೆಗೆದು ಬೈಕ್ ಅಡ್ಡಗಟ್ಟಿ ನಿಲ್ಲಿಸಿ ತಲೆಗೆ ಕಲ್ಲಿನಿಂದ ಹೊಡೆದು 15‌ ಸಾವಿರ ನಗದು ಹಾಗೂ ಒಂದು ಮೊಬೈಲ್, ಬೈಕಿನ ಕೀ ಕಸಿದುಕೊಂಡು ಹೋಗಿದ್ದರು ಎಂದು ದಿನಾಂಕ 11ರಂದು ರೇವಣಸಿದ್ದಪ್ಪ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದರು. 

ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಗ್ರಾಮಾಂತರ ಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ಜೋವಿತ್ ರಾಜ್, ದೇವೆಂದ್ರಪ್ಪ, ನಾಗರಾಜಯ್ಯ, ಮಹೇಶ ಒಳಗೊಂಡ ತಂಡವು ನಿನ್ನೆ ಆರೋಪಿಗಳನ್ನು ಬಂಧಿಸಿದೆ.