ಹರಿಹರದ ಕಿರ್ಲೋಸ್ಕರ್ ಕಾಲೇಜಿನಲ್ಲಿ ಬಿಬಿಎ ಕೋರ್ಸ್‌

ಹರಿಹರದ ಕಿರ್ಲೋಸ್ಕರ್ ಕಾಲೇಜಿನಲ್ಲಿ ಬಿಬಿಎ ಕೋರ್ಸ್‌

ಹರಿಹರ, ಜು.5- ನಗರದ ಕಿರ್ಲೋ ಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್‌ಸ್ಡ್‌ ಮ್ಯಾನೇಜ್ಮೆಂಟ್ ಸ್ಟಡೀಸ್ ವತಿಯಿಂದ ಬಿಬಿಎ ಕೋರ್ಸ್ ಪ್ರಾರಂಭ ವಾಗಿದೆ ಎಂದು ಕೆಎಐಎಂಎಸ್‌ ನಿರ್ದೇಶಕ ಬಿಪ್ಲಬ್ ಕುಮಾರ್ ಬಿಸ್ವಾಲ್ ತಿಳಿಸಿದ್ದಾರೆ.

ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್  ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜು ಆವರಣದಲ್ಲಿ ನಿನ್ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಉದ್ಯೋಗದ ಜೊತೆಗೆ ವೃತ್ತಿಪರ ಕೋರ್ಸ್‌ಗೆ ಆದ್ಯತೆ ನೀಡಬೇಕು ಎಂದು  ಬಿಬಿಎ ಕೋರ್ಸ್‌ಗೆ ಪ್ರಯತ್ನಿಸಲಾಗಿದ್ದು, ಈ ವರ್ಷ ದಾವಣ ಗೆರೆ ವಿವಿಯಿಂದ ಅನುಮತಿ ದೊರೆತಿದೆ.  ಈ ಕೋರ್ಸ್‌ಗೆ ಕಲೆ, ವಿಜ್ಞಾನ, ವಾಣಿಜ್ಯ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿ ದವರು ಪ್ರವೇಶ ಪಡೆಯಬಹುದು ಎಂದರು. ಪ್ರಾಂಶುಪಾಲ ಚೇತನ್ ವಿ. ಹಿರೇಮಠ ಡೀನ್ ಅಕಾಡೆಮಿಕ್ಸ್ ಡಾ. ಬಿ.ವಿ. ನಾಗರಾಜ್, ರಾಘವೇಂದ್ರ, ಅನ್ನಪೂರ್ಣ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.